ಆರ್ಟಿಜಿಸ್ (Real Time Gross Settlement System) ಭಾನುವಾರ ಕನಿಷ್ಟ 14 ಗಂಟೆಗಳ ಕಾಲ ಲಭ್ಯವಿರೋದಿಲ್ಲ ಎಂದು ಸೋಮವಾರ ರಿಸರ್ವ್ ಬ್ಯಾಂಕ್ ಇಂಡಿಯಾ ಹೇಳಿತ್ತು. ಏಪ್ರಿಲ್ 18ರಂದು ಮಧ್ಯರಾತ್ರಿ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರ್ಟಿಜಿಎಸ್ ಸೇವೆ ಲಭ್ಯವಿರೋದಿಲ್ಲ. ಆರ್ಟಿಜಿಎಸ್ ತಂತ್ರಜ್ಞಾನ ಉನ್ನತೀಕರಣ ಮಾಡ್ತಿರೋದ್ರಿಂದ ಈ ಸೇವೆ ಲಭ್ಯವಿರೋದಿಲ್ಲ ಎಂದು ಹೇಳಿದೆ.
ಆರ್ಟಿಜಿಎಸ್ ಸೇವೆ ಅಲಭ್ಯವಿರುವ ವೇಳೆ ಎನ್ಇಎಫ್ಟಿ ( National Electronic Funds Transfer) ಸೇವೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಎಲ್ಲಾ ಗ್ರಾಹಕರಿಗೆ ಮಾಹಿತಿ ನೀಡೋದು ಆಯಾ ಬ್ಯಾಂಕ್ಗಳ ಕರ್ತವ್ಯ ಎಂದೂ ಆರ್ಬಿಐ ಸೂಚನೆ ನೀಡಿದೆ. ತಂತ್ರಜ್ಞಾನ ಉನ್ನತೀಕರಣ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ಆರ್ಟಿಜಿಎಸ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಆರ್ಬಿಐ ಹೇಳಿದೆ.
ಆರ್ಬಿಐ ಕಳೆದ ವಾರ ಕೆಲ ಮಹತ್ವದ ಘೋಷಣೆಯನ್ನ ಮಾಡಿದ್ದು, ಇದರಲ್ಲಿ ಎನ್ಇಎಫ್ಟಿ ಹಾಗೂ ಆರ್ಟಿಜಿಎಸ್ನ್ನು ನಾನ್ಬ್ಯಾಂಕಿಂಗ್ ವ್ಯಾಪ್ತಿಗೂ ವಿಸ್ತರಿಸಿದೆ. ಕೇಂದ್ರೀಕೃತ ಪಾವತಿ ವ್ಯವಸ್ಥೆ ಮೂಲಕ ಬ್ಯಾಂಕೇತರ ಸಂಸ್ಥೆಗಳೂ ಸಹ ಆರ್ಟಿಜಿಎಸ್ ಹಾಗೂ ಎನ್ಇಎಫ್ಟಿ ಮಾದರಿಯಲ್ಲಿ ವ್ಯವಹಾರ ನಡೆಸಬಹುದಾಗಿದೆ. ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಲು ಹಾಗೂ ಡಿಜಿಟಲ್ ಬ್ಯಾಂಕಿಂಗ್ಗೆ ಒತ್ತು ನೀಡುವ ಸಲುವಾಗಿ ಆರ್ಬಿಐ ಈ ಕ್ರಮ ಕೈಗೊಂಡಿದೆ.