ಮುಂಬೈ: ಆಗಸ್ಟ್ 1 ರಿಂದ ಬ್ಯಾಂಕ್ ಗ್ರಾಹಕರಿಗೆ ನ್ಯಾಷನಲ್ ಆಟೋಮ್ಯಾಟೆಡ್ ಕ್ಲಿಯರಿಂಗ್ ಹೌಸ್(NACH) ಸೌಲಭ್ಯ ಲಭ್ಯವಿರಲಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯಾ(NPCI) ಬೃಹತ್ ಪಾವತಿ, ವಿತರಣೆ ಸೇವೆ ನೀಡಲಾಗುವುದು. ಅಂದರೆ, ಉದ್ಯೋಗಿಗಳ ವೇತನ, ಪಿಂಚಣಿ ಬಟವಾಡೆ, ಕಂಪನಿಗಳು, ಶೇರುದಾರರಿಗೆ ಪಿಂಚಣಿ ವಿತರಣೆ, ಠೇವಣಿದಾರರಿಗೆ ಬಡ್ಡಿ ಹಂಚಿಕೆ ಮೊದಲಾದ ಸೇವೆಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯಾ ವ್ಯವಸ್ಥೆ ಮೂಲಕ ಒದಗಿಸಲಾಗುತ್ತದೆ. ಆಗಸ್ಟ್ 1 ರಿಂದ ವಾರದ ಎಲ್ಲ ದಿನಗಳ ಕಾಲ ಇದರ ಸೇವೆ ಲಭ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್(RTGS) ಸೇವೆ 24X7 ಲಭ್ಯವಿರಲಿದೆ. ಗ್ರಾಹಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕಿನ ಕೆಲಸದ ದಿನಗಳಲ್ಲಿ ಮಾತ್ರ ಲಭ್ಯವಿರುವ ಈ ಸೇವೆಯನ್ನು ಆಗಸ್ಟ್ 1 ರಿಂದ ಎಲ್ಲ ದಿನಗಳಲ್ಲಿಯೂ ಲಭ್ಯವಿರುವಂತೆ ಮಾಡಲಾಗುವುದು ಎಂದು ಆರ್.ಬಿ.ಐ. ತಿಳಿಸಿದೆ.