alex Certify ಬ್ಯಾಂಕ್‌ ಗ್ರಾಹಕರಿಗೊಂದು ಮಹತ್ವದ ಮಾಹಿತಿ: ಭಾನುವಾರ ದೇಶಾದ್ಯಂತ ಈ ಅವಧಿಯಲ್ಲಿ ಲಭ್ಯವಿರೋದಿಲ್ಲ RTGS ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್‌ ಗ್ರಾಹಕರಿಗೊಂದು ಮಹತ್ವದ ಮಾಹಿತಿ: ಭಾನುವಾರ ದೇಶಾದ್ಯಂತ ಈ ಅವಧಿಯಲ್ಲಿ ಲಭ್ಯವಿರೋದಿಲ್ಲ RTGS ಸೇವೆ

ಏಪ್ರಿಲ್​ 18ರಂದು ಆರ್​​ಟಿಜಿಎಸ್​ ಸೌಕರ್ಯ ಕನಿಷ್ಟ 14 ಗಂಟೆಗಳ ಕಾಲ ಲಭ್ಯವಿರೋದಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಸೋಮವಾರ ಮಾಹಿತಿ ನೀಡಿದೆ.

ಆರ್​ಟಿಜಿಎಸ್​​ನ ತಾಂತ್ರಿಕ ಅಪ್​​ಗ್ರೇಡ್​​ ಮಾಡೋದ್ರಿಂದ ಇದು ರಿಕವರಿ ಆಗಲು ಸಮಯ ಹಿಡಿಯುತ್ತದೆ. ಹೀಗಾಗಿ ಆರ್​ಟಿಜಿಎಸ್ ಸೌಕರ್ಯ ಕನಿಷ್ಟ 14 ಗಂಟೆಗಳ ಕಾಲ ಲಭ್ಯವಿರೋದಿಲ್ಲ ಎಂದು ಆರ್​ಬಿಐ ಮಾಹಿತಿ ನೀಡಿದೆ.

ಬ್ಯಾಂಕ್​ ಸಿಬ್ಬಂದಿ ತಮ್ಮ ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನ ನೀಡಬೇಕು. ಗ್ರಾಹಕರು ಭಾನುವಾರದ ಆರ್​ಟಿಜಿಎಸ್​ ಕಾರ್ಯಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆರ್​ಬಿಐ ಹೇಳಿದೆ.

ಆದರೆ ಈ ಅವಧಿಯಲ್ಲಿ ಎನ್​ಇಎಫ್​​ಟಿ ಸೇವೆ ಎಂದಿನಂತೆಯೇ ಲಭ್ಯವಿರಲಿದೆ ಎಂದು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಹೇಳಿದೆ. ಕಳೆದ ವಾರವಷ್ಟೇ ಆರ್​ಬಿಐ, ಆರ್​​​ಟಿಜಿಎಸ್​ ಹಾಗೂ ಎನ್​ಇಎಫ್​ಟಿ ಸೌಕರ್ಯವನ್ನ ನಾನ್​ ಬ್ಯಾಂಕಿಂಗ್​ ಪಾವತಿ ವ್ಯವಸ್ಥೆಗಳಿಗೂ ವಿಸ್ತರಣೆ ಮಾಡಿತ್ತು.

ಇಲ್ಲಿಯವರೆಗೆ ಕೇವಲ ಬ್ಯಾಂಕ್​​ಗಳು ಮಾತ್ರ ಆರ್​​ಟಿಜಿಎಸ್​ ಹಾಗೂ ಎನ್​ಇಎಫ್​ಟಿ ಪಾವತಿ ವ್ಯವಸ್ಥೆಯನ್ನ ಹೊಂದಿದ್ದವು. ಆದರೆ ಆರ್​ಬಿಐನ ಹೇಳಿಕೆಯ ಬಳಿಕ ಈ ಸೌಕರ್ಯ ಕಾರ್ಡ್​ ನೆಟ್​ವರ್ಕ್​, ವೈಟ್​ ಲೇಬಲ್​, ಪ್ರೀಪೇಯ್ಡ್​ ಪೇಮೆಂಟ್​ ಸಾಧನ, ಟ್ರೇಡ್​ ರೀಸಿವೆಬಲ್ಸ್​ ಡಿಸ್​ಕೌಂಟಿಂಗ್​ ಸಿಸ್ಟೆಮ್​​ಗಳಿಗೂ ವ್ಯಾಪಿಸಿತ್ತು.

ಪಾವತಿ ವ್ಯವಸ್ಥೆಯಲ್ಲಿ ನಾನ್​​ ಬ್ಯಾಂಕ್​​ಗಳೂ ಭಾಗವಹಿಸಬೇಕು ಎಂಬ ಕಾರಣಕ್ಕೆ ಈ ಮಹತ್ವದ ಕ್ರಮವನ್ನ ಕೈಗೊಂಡಿತ್ತು. ಆರ್​ಬಿಐನ ಈ ಸಕಾರಾತ್ಮಕ ಬೆಳವಣಿಗೆಯಿಂದಾಗಿ ದೇಶದ ಆರ್ಥಿಕತೆಗೆ ಬಹುದೊಡ್ಡ ಲಾಭ ಸಿಗಲಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...