ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ 61,999 ರೂ. ಗರಿಷ್ಠ ದರದಲ್ಲಿ ಮಾರಾಟವಾಗಿದ್ದು, ಸ್ಥಿರತೆ ಕಾಯ್ದುಕೊಂಡಿದೆ.
ಸೋಮವಾರ ಬ್ಯಾಡಗಿ ಎಪಿಎಂಸಿಗೆ 1,68,489 ಚೀಲಗಳಲ್ಲಿ 42,122 ಕ್ವಿಂಟಲ್ ಮೆಣಸಿನ ಕಾಯಿ ಮಾರಾಟಕ್ಕೆ ಬಂದಿದೆ. ಕಳೆದ ವಾರ 28,506 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿತ್ತು. ಈ ಹಂಗಾಮಿನಲ್ಲಿ ಮೊದಲ ಬಾರಿಗೆ 1.50 ಲಕ್ಷಕ್ಕೂ ಹೆಚ್ಚು ಚೀಲ ಮಾರಾಟಕ್ಕೆ ಬಂದಿದೆ.
ಕಡ್ಡಿ ಮೆಣಸಿನಕಾಯಿ ಕ್ವಿಂಟಲ್ ಗೆ 50,189 ರೂ.ಗೆ ಗರಿಷ್ಠ ದರದಲ್ಲಿ ಮಾರಾಟವಾಗಿದ್ದು, ಕಳೆದ ಗುರುವಾರಕ್ಕಿಂತ 4000 ರೂ. ಕಡಿಮೆಯಾಗಿದೆ. ಗುಂಟೂರು ತಳಿ ಮೆಣಸಿನ ಕಾಯಿ 18,129 ರೂ., ಡಬ್ಬಿ ಮೆಣಸಿನಕಾಯಿ 61,999 ರೂ. ಗರಿಷ್ಠ ದರದಲ್ಲಿ ಮಾರಾಟವಾಗಿ ಸ್ಥಿರತೆ ಕಾಯ್ದುಕೊಂಡಿವೆ.