ಕೇಂದ್ರ ಸರ್ಕಾರ ಮಂಡಿಸಿದ 2021ನೇ ಸಾಲಿನ ಬಜೆಟ್ನಲ್ಲಿ ರೈಲ್ವೆ ಪ್ರಯಾಣಿಕರ ಸೌಲಭ್ಯದ ಕಡೆಗೂ ಸೂಕ್ತ ಗಮನ ನೀಡಲಾಗಿದೆ. 3ನೇ ಬಾರಿಗೆ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೆ ಇಲಾಖೆ ಅಭಿವೃದ್ಧಿಗೆ ಬರೋಬ್ಬರಿ 1,10,055 ಕೋಟಿ ರೂಪಾಯಿ ಮೀಸಲಿಟ್ಟಿರೋದಾಗಿ ಹೇಳಿದ್ರು.
ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಅಭಿವೃದ್ಧಿಗೆ 25 ಸಾವಿರ ಕೋಟಿ ರೂಪಾಯಿ ಘೋಷಣೆಯಾಗಿದೆ ಹಾಗೂ ಚೆನ್ನೈ ಮೆಟ್ರೋಗೆ 63000 ಕೋಟಿ ರೂಪಾಯಿ ಹಣವನ್ನ ಮೀಸಲಿಡಲಾಗಿದೆ. ಅಲ್ಲದೇ ದೇಶದಲ್ಲಿ ಮೆಟ್ರೋ ಹಾಗೂ ಪಿಪಿಪಿ ಮಾಡೆಲ್ಗಳ ಅರ್ಬನ್ ಬಸ್ ಮತ್ತು 20000 ಬಸ್ಗಳನ್ನ ನಗರದಲ್ಲಿ ಬಿಡಲಾಗುವುದು ಎಂದು ಹೇಳಿದ್ದಾರೆ.
ಇದರ ಜೊತೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಮತ್ತೆರಡು ಮೆಟ್ರೋ ಮಾರ್ಗ ಘೋಷಣೆ ಮಾಡಿದ್ರು. 2 ಎ ಹಾಗೂ 2 ಬಿ ಹಂತದ ಮೆಟ್ರೋ ಕಾಮಗಾರಿಯನ್ನ ಘೋಷಿಸಲಾಗಿದೆ. ಈ ಎರಡು ಮೆಟ್ರೋ ಮಾರ್ಗಗಳು 58.19 ಕಿಲೋ ಮೀಟರ್ ಇರಲಿದ್ದು ಇದಕ್ಕೆ ಕೇಂದ್ರ ಸರ್ಕಾರ 14,788 ಕೋಟಿ ರೂಪಾಯಿ ಮೀಸಲಿಟ್ಟಿದೆ.