ಭಾರತೀಯ ಮಾರುಕಟ್ಟೆಗಳಲ್ಲಿ ರೆಟ್ರೋ ಕ್ಲಾಸಿಕ್ ಬೈಕ್‌ಗಳಿಗೆ ದಿನೇ ದಿನೇ ಟ್ರೆಂಡ್ ಹೆಚ್ಚುತ್ತಿರುವ ನಡುವೆ ಈ ಸೆಕ್ಟರ್‌ನಲ್ಲಿ ಇನ್ನಷ್ಟು ಬೈಕ್‌ಗಳನ್ನು ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಮುಂದೆ ಬಂದಿದೆ.
2021ರಲ್ಲಿ ಮೂರು ಹೊಸ ಬೈಕ್‌ಗಳ ಜೊತೆಗೆ ಹಿಮಾಲಯನ್ ಸರಣಿಯ ಸುಧಾರಿತ ಬೈಕ್‌ಗಳನ್ನು ಮಾರುಕಟ್ಟೆಗೆ ತರಲಿದೆ ರಾಯಲ್ ಎನ್‌ಫೀಲ್ಡ್. ಈ ಹೊಸ ಬೈಕ್‌ಗಳ ಪಟ್ಟಿ ಇಂತಿದೆ:
ನ್ಯೂ ಕ್ಲಾಸಿಕ್ 350
ರಾಯಲ್ ಎನ್‌ಫೀಲ್ಡ್‌ನ 350 ಸಿಸಿ ವಿಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಬೈಕ್‌ನ ಹೊಸ ತಲೆಮಾರಿನ ಮಾಡೆಲ್ ಅನ್ನು ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ.
ರಾಯಲ್ ಎನ್‌ಫೀಲ್ಡ್ ಇಂಟರ್ಸೆಪ್ಟರ್ 350
ತನ್ನ 350 ಸಿಸಿ ಇಂಜಿನ್ ಜೊತೆಗೆ ಈ ಜನಪ್ರಿಯ ಬೈಕ್ ಅನ್ನು ಕಂಪನಿ ಲಾಂಚ್ ಮಾಡಲಿದೆ. ಈ ಬೈಕ್ ಮೂಲಕ ಮಧ್ಯಮ ಗಾತ್ರದ ಬೈಕ್‌ಗಳ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ನ ಹಾಜರಾತಿ ಇರಲಿದೆ. ಈ ಬೈಕ್‌ಗೆ ಟಿಪ್ಪರ್ ನೇವಿಗೇಷನ್ ವ್ಯವಸ್ಥೆ ಇದೆ.
ರಾಯಲ್ ಎನ್‌ಫೀಲ್ಡ್ 650 ಕ್ರೂಸರ್
ಉದ್ದನೆಯ ವೀಲ್ ಬೇಸ್‌ನೊಂದಿಗೆ ಈ ಬೈಕ್ ಅನ್ನು 2021ರಲ್ಲಿ ಲಾಂಚ್ ಮಾಡಲಿದೆ ರಾಯಲ್ ಎನ್‌ಫೀಲ್ಡ್. ವೃತ್ತಕಾರದ ಲ್ಯಾಂಪ್, ಅಲಾಯ್ ಚಕ್ರಗಳು, ವಿಶಿಷ್ಟವಾದ ಇಂಧನ ಟ್ಯಾಂಕ್, ಎಕ್ಸಾಸ್ಟ್ ಕ್ಯಾನಿಸ್ಟರ್ ಹಾಗೂ ಉದ್ದನೆಯ ಸೀಟನ್ನು ಸಹ ಈ ಬೈಕ್ ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕನ್ನು ಅಪ್ಡೇಟ್ ಮಾಡಲು ಹೊರಟಿದೆ ಕಂಪನಿ. ಆರ್‌ಇ ಮೆಟಿಯಾರ್ 350 ಬೈಕಿಗೆ ಅಳವಡಿಸಿರುವ ಹೊಸ ಟ್ರಿಪ್ಪರ್ ನೇವಿಗೇಷನ್ ವ್ಯವಸ್ಥೆಯನ್ನು ಈ ಬೈಕ್‌ಗೆ ಅಳವಡಿಸುವ ಮೂಲಕ ಅಪ್ಡೇಟ್ ಮಾಡಲಾಗಿದೆ.
ಸಿಂಗಲ್ ಸಿಲಿಂಡರ್ ಜೊತೆಗೆ 411ಸಿಸಿ ಏರ್ ಕೂಲ್ಡ್ ಇಂಜಿನ್ ಜೊತೆಗೆ 24.3 ಬಿಎಚ್‌ಪಿ ಹಾಗೂ 20Nm ಟಾರ್ಕ್ ಸಾಮರ್ಥ್ಯವನ್ನೂ ಸಹ ಹೊಂದಿದೆ.