ದೇಶದ ಪ್ರಸಿದ್ಧ ಬೈಕ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್ ಇದೀಗ ತನ್ನ ಹೊಸ ಮಾಡೆಲ್ ಮೀಟಿಯೊರ್ 350 ಅನ್ನು ಪರಿಚಯಿಸಲು ಸಜ್ಜಾಗಿದೆ. ಮುಂದಿನ ಕೆಲ ದಿನದಲ್ಲಿ ಇದು ಬಿಡುಗಡೆಯಾಗಲಿದೆ. ಆದರೆ ಈಗಾಗಲೇ ಎಲ್ಲ ಮಾಹಿತಿ ಬಹಿರಂಗವಾಗಿದೆ.
ಮೂರು ಅವತರಣಿಕೆಯಲ್ಲಿ ಬಿಡುಗಡೆಯಾಗಲಿರುವ ಈ ಮಾಡೆಲ್ ನಲ್ಲಿ ಏಳು ಬಣ್ಣವನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಬ್ಲೂಟೂತ್ ಅನ್ನು ಪರಿಚಯಿಸಿದೆ. ಇದರೊಂದಿಗೆ ಡಿಜಿಟಲ್ ಸ್ಪೀಡೋಮೀಟರ್ ನೀಡಿದೆ. ಇದರ ಬೆಲೆ 2 ಲಕ್ಷ ರೂ. ಆಗಿರಲಿದೆ ಎಂದು ತಿಳಿದುಬಂದಿದೆ.
350 ಸಿಸಿಯ ಈ ಬೈಕ್ ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್, ಬಿಎಸ್ 6 ಎಂಜಿನ್ ಹೊಂದಿದೆ. ಎಲ್ಇಡಿ ಲ್ಯಾಂಪ್, 15 ಲೀ ಸಾಮರ್ಥದ ಪೆಟ್ರೋಲ್ ಟ್ಯಾಂಕ್ ಹೊಂದಿದೆ ಎಂದು ಹೇಳಲಾಗಿದೆ.