ಇಂಧನ ಬೆಲೆ ಏರಿಕೆಯ ಮಧ್ಯೆ ಏಪ್ರಿಲ್ 1 ರ ಶುಕ್ರವಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತೆರಿಗೆಯನ್ನು ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್.ಹೆಚ್.ಎ.ಐ.) ಟೋಲ್ ತೆರಿಗೆಯನ್ನು 10 ರಿಂದ 65 ರೂ.ಗೆ ಹೆಚ್ಚಿಸಿದೆ. ಲಘು ವಾಹನಗಳ ಬೆಲೆಯನ್ನು ಇಲಾಖೆ ಒಂದು ಮಾರ್ಗಕ್ಕೆ 10 ರೂ. ಮತ್ತು ವಾಣಿಜ್ಯ ವಾಹನಗಳಿಗೆ 65 ರೂ.ಗೆ ಹೆಚ್ಚಿಸಿದೆ.
ಪ್ರತಿ ಹಣಕಾಸು ವರ್ಷದಲ್ಲಿ, NHAI ಟೋಲ್ ತೆರಿಗೆಯನ್ನು ಪರಿಷ್ಕರಿಸುತ್ತದೆ. ಇದರಿಂದಾಗಿ ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ದುಬಾರಿಯಾಗಲಿದೆ.
2022-23ನೇ ಹಣಕಾಸು ವರ್ಷಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಎನ್.ಹೆಚ್.ಎ.ಐ. ಯೋಜನಾ ನಿರ್ದೇಶಕ ಎನ್.ಎನ್. ಗಿರಿ ತಿಳಿಸಿದ್ದಾರೆ. ದೆಹಲಿಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಕಾರು ಮತ್ತು ಜೀಪ್‌ಗಳ ಟೋಲ್ ತೆರಿಗೆಯನ್ನು 10 ರೂ. ಹೆಚ್ಚಿಸಲಾಗಿದೆ. ಭಾರಿ ಗಾತ್ರದ ವಾಹನದ ಟೋಲ್ ನಲ್ಲಿ ಅತಿ ಹೆಚ್ಚು ಏರಿಕೆ ಮಾಡಲಾಗಿದೆ. ಈ ಪೈಕಿ ಒನ್ ವೇ ಟೋಲ್ ಅನ್ನು 65 ರೂ.ನಷ್ಟು ಹೆಚ್ಚಿಸಲಾಗಿದೆ.