ನವದೆಹಲಿ: ಫೆಬ್ರವರಿಯಲ್ಲಿ ಪೆಟ್ರೋಲ್ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ದ್ವಿಚಕ್ರವಾಹನ ಮಾರಾಟದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ.
ಆಟೋ ಡೀಲರ್ ಅಸೋಶಿಯೇಷನ್ ಪದಾಧಿಕಾರಿಗಳು ನೀಡಿರುವ ಮಾಹಿತಿಯಂತೆ ಫೆಬ್ರವರಿಯಲ್ಲಿ ದ್ವಿಚಕ್ರವಾಹನ ಚಿಲ್ಲರೆ ಮಾರಾಟ, ನೋಂದಣಿಯಲ್ಲಿ ಶೇಕಡ 16 ರಷ್ಟು ಕುಸಿತವಾಗಿದೆ. ಕೊರೋನಾ ನಂತರದಲ್ಲಿ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡು ಬರುತ್ತಿತ್ತು. ಆದರೆ. ಪೆಟ್ರೋಲ್ ಬೆಲೆ ಗಗನಕ್ಕೆರಿದ ಪರಿಣಾಮ, ಕೊರೋನಾ ಎರಡನೆಯ ಅಲೆ, ಶಿಕ್ಷಣ ಸಂಸ್ಥೆಗಳು ಸತತವಾಗಿ ಮುಚ್ಚಿರುವುದರಿಂದ ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದೆ. ಫೆಬ್ರವರಿಯಲ್ಲಿ ಶೇಕಡ 16 ರಷ್ಟು ದ್ವಿಚಕ್ರ ವಾಹನ ಮಾರಾಟ ಕುಸಿತವಾಗಿದೆ ಎಂದು ಹೇಳಲಾಗಿದೆ.
ಫೆಬ್ರವರಿಯಲ್ಲಿ ಚಿಲ್ಲರೆ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಅಲ್ಪ ಏರಿಕೆ ಕಂಡಿದೆ. ಆದರೆ, ತೈಲ ಬೆಲೆ ಏರಿಕೆಯ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ದ್ವಿಚಕ್ರ ಮತ್ತು ವಾಣಿಜ್ಯ ವಾಹನಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.