
ದೇಶದಲ್ಲಿ 2019 ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸಲಾಗುತ್ತಿದೆ. ಹೊಸ ಕಾಯ್ದೆ ಪ್ರಕಾರ, ಪರವಾನಗಿ ಇಲ್ಲದೆ ವಾಹನ ಚಲಾವಣೆ ಮಾಡಿದ್ರೆ 5,000 ರೂಪಾಯಿ ದಂಡ ವಿಧಿಸಲಾಗುವುದು.
ಅಚ್ಚರಿಯ ವಿಷ್ಯವೊಂದಿದೆ. ನೀವು ಚಪ್ಪಲಿ ಧರಿಸಿ ವಾಹನ ಚಲಾಯಿಸಿದ್ರೆ ಅದು ಅಪರಾಧ ವಿಭಾಗದಲ್ಲಿ ಬರಲಿದೆ. ಈ ನಿಯಮ ಇನ್ನೂ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಟ್ರಾಫಿಕ್ ನಿಯಮದ ಪ್ರಕಾರ ಚಪ್ಪಲಿ ಅಥವಾ ಸ್ಯಾಂಡಲ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವಂತಿಲ್ಲ. ಚಾಲಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ಜಾರಿಗೆ ತರಲಾಗಿದೆ.
ಚಪ್ಪಲಿ ಧರಿಸಿ ಗೇರ್ ವಾಹನ ಚಲಾಯಿಸುವಂತಿಲ್ಲ. ಇದ್ರಿಂದ ಅಪಘಾತ ಹೆಚ್ಚಾಗುತ್ತದೆ ಎಂಬುದು ಇದರ ಹಿಂದಿರುವ ಕಾರಣ. ಚಪ್ಪಲಿ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿದ್ರೆ 1000 ರೂಪಾಯಿಯವರೆಗೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಚಪ್ಪಲಿ ಧರಿಸಿ ವಾಹನ ಚಲಾಯಿಸಿ ಸಿಕ್ಕಿಬಿದ್ರೆ 15 ದಿನಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ.
ಅಲ್ಲದೇ ವಾಹನ ಚಲಾವಣೆ ವೇಳೆ ಮ್ಯಾಪ್ ನಲ್ಲಿ ಕೇವಲ ರೂಟ್ ನೋಡಲು ಮಾತ್ರ ಮೊಬೈಲ್ ಬಳಸಬಹುದಾಗಿದೆ. ಒಂದೊಮ್ಮೆ ವಾಹನ ಚಲಾವಣೆ ವೇಳೆ ಮಾತನಾಡಲು ಮೊಬೈಲ್ ಬಳಸಿದ್ರೆ 5 ಸಾವಿರ ರೂಪಾಯಿಗಳವರೆಗೆ ದಂಡ ಬೀಳಲಿದೆ.