ಬೆಂಗಳೂರು: ರಾಜ್ಯದಲ್ಲಿ ಮುಂಗಾರು ತೀವ್ರ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶ ನಿಗದಿತ ಗುರಿಗಿಂತ ಶೇಕಡ 35 ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮ ಭತ್ತದ ಉತ್ಪಾದನೆ ಭಾರಿ ಕುಂಠಿತವಾಗಿದ್ದು, ಅಕ್ಕಿ ದರ ಏರಿಕೆಯಾಗತೊಡಗಿದೆ.
ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಅಕ್ಕಿ ದರ ಶೇಕಡ 10 – 20 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ದರ ಹೆಚ್ಚಳದಿಂದ ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಮತ್ತೆ ಅಕ್ಕಿ ದರ ಏರುಗತಿಯಲ್ಲಿ ಸಾಗಿರುವುದು ನುಂಗಲಾರದ ತುತ್ತಾಗಿದೆ.
ಸಾಮಾನ್ಯ ಸೋನಾ ಮಸೂರಿ ಒಂದು ಕ್ವಿಂಟಾಲ್ ಗೆ 6,000 ರೂ. ಇದೆ. ಆರ್.ಎನ್.ಆರ್. ಸೋನಾ ಅಕ್ಕಿ ದರ ಕ್ವಿಂಟಾಲ್ ಗೆ 6,500 ರೂಪಾಯಿ ಇದೆ. ಎರಡು ಮೂರು ತಿಂಗಳ ಹಿಂದೆ ರಾಜಮುಡಿ ಅಕ್ಕಿ ದರ ಕೆಜಿಗೆ 60 ರೂಪಾಯಿ ಆಸು ಪಾಸಿನಲ್ಲಿತ್ತು. ಪ್ರಸ್ತುತ 80 -90 ರೂಪಾಯಿ ಹೆಚ್ಚಳ ಆಗಿದೆ. ಮುಂದಿನ ದಿನಗಳಲ್ಲಿ ಅಕ್ಕಿ ದರ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.