ನವದೆಹಲಿ: ಚಿಲ್ಲರೆ ಹಣದುಬ್ಬರ ಕುಸಿತ ಕಂಡಿದ್ದು, ಆಗಸ್ಟ್ ನಲ್ಲಿ ಶೇಕಡ 5.3 ಕ್ಕೆ ಇಳಿದಿದೆ. ಜುಲೈನಲ್ಲಿ ಶೇಕಡ 5.59 ರಷ್ಟು ಇದ್ದು, ಅದಕ್ಕೆ ಹೋಲಿಸಿದರೆ ಹಣದುಬ್ಬರ ಕುಸಿತವಾಗಿದೆ. ಹಿಂದಿನ ತಿಂಗಳಲ್ಲಿ ಶೇಕಡ 3.96 ಕ್ಕೆ ಹೋಲಿಸಿದರೆ ಆಗಸ್ಟ್ ನಲ್ಲಿ ಶೇಕಡ 3.11 ರಷ್ಟು ಆಗಿತ್ತು.
ಚಿಲ್ಲರೆ ಹಣದುಬ್ಬರವು ಆಗಸ್ಟ್ ನಲ್ಲಿ ಶೇಕಡ 5.3 ಕ್ಕೆ ಕುಸಿದಿದ್ದು, ಮುಖ್ಯವಾಗಿ ಆಹಾರದ ಬೆಲೆಗಳ ಮೇಲೆ ಪರಿಣಾಮ ಬೀರಲಿವೆ. ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು 2020 ರ ಜುಲೈನಲ್ಲಿ ಶೇಕಡ 5.59 ಮತ್ತು ಆಗಸ್ಟ್ ನಲ್ಲಿ ಶೇಕಡ 6.69 ರಷ್ಟು ಇತ್ತು.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ(NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಹಣದುಬ್ಬರವು ಹಿಂದಿನ ತಿಂಗಳಲ್ಲಿ ಶೇಕಡ 3.96 ಕ್ಕೆ ಹೋಲಿಸಿದರೆ ಆಗಸ್ಟ್ ನಲ್ಲಿ ಶೇಕಡ 3.11 ರಷ್ಟು ಆಗಿತ್ತು. ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ಪಾಲಿಸಿಯಲ್ಲಿ ಪ್ರಮುಖ ಬಡ್ಡಿ ದರವನ್ನು ಬದಲಾಗದೆ ಉಳಿಸಿದೆ. ಆರ್‌ಬಿಐ 2021-22ರ ಅವಧಿಯಲ್ಲಿ ಸಿಪಿಐ ಹಣದುಬ್ಬರ ಶೇಕಡ 5.7 ರಷ್ಟು ಇದೆ. ಎರಡನೇ ತ್ರೈಮಾಸಿಕದಲ್ಲಿ ಶೇಕಡ 5.9 ರಷ್ಟು, ಮೂರನೆಯದರಲ್ಲಿ ಶೇಕಡ 5.3 ರಷ್ಟು ಮತ್ತು ಹಣಕಾಸಿನ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 5.8 ರಷ್ಟು ಇದೆ ಎಂಬುದನ್ನು ಗಮನಿಸಬಹುದಾಗಿದೆ.