ದೇಶದ ಖಾಸಗಿ ಬ್ಯಾಂಕ್ ಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸರ್ಕಾರಿ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ಖಾಸಗಿ ಬ್ಯಾಂಕ್ ಗಳಿಗೆ ಆರ್ಬಿಐ ಅನುಮತಿ ನೀಡಿದೆ. ಇನ್ಮುಂದೆ ಖಾಸಗಿ ಬ್ಯಾಂಕುಗಳು ಸರ್ಕಾರಿ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ಹೆಚ್ಚು ಗಳಿಸಬಹುದು.
ಇದುವರೆಗೂ ಸರ್ಕಾರದ ಬ್ಯಾಂಕಿಂಗ್ ಕಾರ್ಯಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳ ಮೂಲಕ ಮಾತ್ರ ನಡೆಸಲಾಗುತ್ತಿತ್ತು. ಇದರಲ್ಲಿ ಖಾಸಗಿ ಬ್ಯಾಂಕುಗಳ ಪಾಲ್ಗೊಳ್ಳುವಿಕೆ ಇರಲಿಲ್ಲ. ಖಾಸಗಿ ವಲಯದ ಬ್ಯಾಂಕುಗಳಿಗೆ ಸರ್ಕಾರಿ ವ್ಯವಹಾರವನ್ನು ಹಂಚಿಕೆ ಮಾಡಲು 2012 ರ ಸೆಪ್ಟೆಂಬರ್ನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಹಣಕಾಸು ಸಚಿವಾಲಯ ಘೋಷಿಸಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ತಿಂಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿದ್ದರು. ಖಾಸಗಿ ಬ್ಯಾಂಕುಗಳ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಿದ್ರೆ ಗ್ರಾಹಕರಿಗೆ ಅನುಕೂಲವಾಗಲಿದೆ. ಸ್ಪರ್ಧೆ ಹೆಚ್ಚಾಗುತ್ತದೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಸಿಗಲಿದೆ.
ಮೊದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ದಾಖಲೆಯ ಮಟ್ಟಕ್ಕೆ ಇಂಧನ ದರ ಹೆಚ್ಚಳ
ಆರ್ಬಿಐ ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಸರ್ಕಾರಿ ಕೆಲಸದಲ್ಲಿ ಖಾಸಗಿ ಬ್ಯಾಂಕ್ ಪಾಲ್ಗೊಳ್ಳಬಹುದು. ಆದ್ರೆ ಆರ್ಬಿಐನ ಪಿಸಿಎ ನಲ್ಲಿರುವ ಬ್ಯಾಂಕ್ ಗಳಿಗೆ ಈ ಸೌಲಭ್ಯವಿರುವುದಿಲ್ಲ.