alex Certify ಕಡಿಮೆ ದುಡ್ಡಲ್ಲಿ ವಿಮಾನವೇರುವವರಿಗೆ ಶುಭ ಸುದ್ದಿ: ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್, 926 ರೂ.ನಲ್ಲಿ ವಿಮಾನ ಪ್ರಯಾಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ದುಡ್ಡಲ್ಲಿ ವಿಮಾನವೇರುವವರಿಗೆ ಶುಭ ಸುದ್ದಿ: ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್, 926 ರೂ.ನಲ್ಲಿ ವಿಮಾನ ಪ್ರಯಾಣ..!

ಕೊರೋನಾ ಉಲ್ಬಣದೊಂದಿಗೆ, ಅನೇಕ ರಾಜ್ಯಗಳು ವಿಮಾನಗಳನ್ನು ನಿಷೇಧಿಸಿವೆ ಅಥವಾ ಈ ವಿಮಾನಗಳ ಹಾರಾಟದ ಆವರ್ತನವನ್ನು ಕಡಿತಗೊಳಿಸಿವೆ. ಇದರಿಂದಾಗಿ ಟಿಕೆಟ್ ದರಗಳು ಹೆಚ್ಚಾಗುತ್ತಿವೆ. ಆದರೆ ಕಡಿಮೆ ವೆಚ್ಚದಲ್ಲಿ ವಿಮಾನದ ಮೂಲಕ ಪ್ರಯಾಣಿಸುವ ಬಯಕೆ ಹಾಗೂ ಅವಶ್ಯಕತೆ ಇದ್ದವರಿಗೆ ಗೋಫಸ್ಟ್ ಶುಭಸುದ್ದಿ ನೀಡಿದೆ‌.

ಗಣರಾಜ್ಯೋತ್ಸವದ ಮುನ್ನ ಗೋ ಫಸ್ಟ್ ಏರ್‌ಲೈನ್ಸ್ ಹೊಸ ಕೊಡುಗೆಯನ್ನು ಪರಿಚಯಿಸಿದ್ದು, ಈ ಆಫರ್ ಮೂಲಕ ಕೇವಲ 1,000 ಕ್ಕಿಂತ ಕಡಿಮೆ, ನಿಖರವಾಗಿ ಹೇಳುವುದಾದರೆ 926 ರೂಪಾಯಿಯಿಂದ ವಿಮಾನದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ರೈಟ್ ಟು ಫ್ಲೈ ಎಂಬ ಹೆಸರಿನಲ್ಲಿ ಗೋಫಸ್ಟ್ ಈ ಬಂಪರ್ ಕೊಡುಗೆ ನೀಡಿದೆ‌‌.

ಇದರ ಮೂಲಕ ಗ್ರಾಹಕರು ದೇಶದಾದ್ಯಂತ ಅನೇಕ ಸ್ಥಳಗಳಿಗೆ ಅಗ್ಗವಾಗಿ ಪ್ರಯಾಣಿಸಬಹುದು. ‘ರೈಟ್ ಟು ಫ್ಲೈ’ ಆಫರ್‌ನ ಅಡಿಯಲ್ಲಿ, ಟಿಕೆಟ್‌ಗಳ ಬೆಲೆ 926ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಆಫರ್‌ ನ ಗರಿಷ್ಠ ಪ್ರಯೋಜನವನ್ನು ಪಡೆಯಲು ಬಯಸಿದರೆ ಜನವರಿ 22 – 26 ರ ನಡುವೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಅಲ್ಲದೇ ಫೆಬ್ರವರಿ 11 – ಮಾರ್ಚ್ 31 ಭರ್ಜರಿ ಕೊಡುಗೆ ನೀಡಲಾಗಿದೆ. ಇದು ಏಕಮುಖ ವಿಮಾನ ಟಿಕೆಟ್ ಕೊಡುಗೆಯಾಗಿದ್ದು, ರೌಂಡ್ ಟ್ರಿಪ್‌ಗಳಿಗೆ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ.

ಗೋ ಫಸ್ಟ್ ನ ಈ ಆಫರ್ ದೇಶೀಯ ಪ್ರಯಾಣಕ್ಕೆ ಮಾತ್ರ ಲಭ್ಯವಿದೆ‌. ಅಂತರಾಷ್ಟ್ರೀಯ ವಿಮಾನಗಳಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ಈ ಕೊಡುಗೆಯ ಅಡಿಯಲ್ಲಿ, ನೀವು Go First ಏರ್‌ಲೈನ್‌ನ ಗಣರಾಜ್ಯೋತ್ಸವದ ಆಫರ್‌ ನ ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದರೆ, ಪ್ರಯಾಣದ ಮೂರು ದಿನಗಳ ಮೊದಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ವಿಮಾನ ಟಿಕೆಟ್‌ಗಳನ್ನು ರೀಶೆಡ್ಯೂಲ್ ಮಾಡಬಹುದು. ಆದರೆ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ ರದ್ದತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...