ಕೋಟಾ ನೋಟುಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಏನೆಲ್ಲ ಕ್ರಮಕೈಗೊಳ್ಳುತ್ತಿದೆ. ಆದ್ರೆ ಕೋಟಾ ನೋಟಿನ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಒಮ್ಮೆ ಮಾರುಕಟ್ಟೆಗೆ ಬಂದ್ಮೇಲೆ ಒಬ್ಬರ ಕೈನಿಂದ ಇನ್ನೊಬ್ಬರ ಕೈಗೆ ಕೋಟಾ ನೋಟುಗಳು ಹರಿದಾಡುತ್ತಿರುತ್ತವೆ. ನಿಮ್ಮ ಬಳಿ ಇರುವ ನೋಟು ಯಾವುದು ಎಂಬುದನ್ನು ನೀವು ಪತ್ತೆ ಮಾಡುವುದು ಬಹಳ ಮುಖ್ಯ.
ನಕಲಿ ನೋಟಿನ ಪರೀಕ್ಷೆ ಹೇಗೆ ಎಂಬುದನ್ನು ಆರ್ ಬಿ ಐ ವಿವರಿಸಿದೆ. ಅಸಲಿ, ನಕಲಿ ನೋಟಿನ ಗುರುತಿನ ಬಗ್ಗೆ ಆರ್ ಬಿ ಐ ಕೆಲ ಮಾರ್ಗಗಳನ್ನು ಹೇಳಿದೆ. ಹಣಕಾಸು ಜಾಗೃತಿ ಸಪ್ತಾಹದಂದು ರಿಸರ್ವ್ ಬ್ಯಾಂಕ್ ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದೆ. ಹತ್ತು, ಇಪ್ಪತ್ತು, ಐವತ್ತು, ಇನ್ನೂರರ ನೋಟಿನ ನಕಲಿ, ಅಸಲಿ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕಿರು ಹೊತ್ತಿಗೆಯನ್ನು ಜಾರಿಗೆ ತಂದಿದೆ.
ಉದ್ಯೋಗಿಗಳೇ ಗಮನಿಸಿ: ಸಂಬಳ, ಪಿಎಫ್ ಮೇಲೆ ಪರಿಣಾಮ ಬೀರಲಿದೆ ಹೊಸ ವೇತನ ಸಂಹಿತೆ
ಉದಾಹರಣೆಗೆ 50 ರೂಪಾಯಿ ನೋಟಿನಲ್ಲಿ 50 ರೂಪಾಯಿಯನ್ನು ದೇವನಗರಿಯಲ್ಲಿ ಬರೆದಿರಲಾಗುತ್ತದೆ. ಮಧ್ಯದಲ್ಲಿ ಮಹಾತ್ಮಾ ಗಾಂಧಿ ಫೋಟೋ ಇರುತ್ತದೆ. ಸೂಕ್ಷ್ಮ ಅಕ್ಷರದಲ್ಲಿ ಆರ್ ಬಿ ಐ, ಭಾರತ್, ಇಂಡಿಯಾ, 50 ಎಂದು ಬರೆದಿರುತ್ತದೆ. ಬಲ ಭಾಗದಲ್ಲಿ ಅಶೋಕ ಸ್ತಂಭದ ಫೋಟೋ ಇರುತ್ತದೆ. ನೋಟಿನ ಮೇಲೆ ಎಡಭಾಗದಲ್ಲಿ ಹಾಗೂ ಬಲಭಾಗದ ಕೆಳಗೆ ನೋಟಿನ ಸಂಖ್ಯೆ ಇರುತ್ತದೆ. ನೋಟಿನ ಹಿಂದೆ ಮುದ್ರಣಗೊಂಡ ವರ್ಷವಿರುತ್ತದೆ. ಸ್ವಚ್ಛ ಭಾರತದ ಲೋಗೋ ಹಾಗೂ ಘೋಷಣೆಯಿರುತ್ತದೆ. ಭಾಷಾ ಫಲಕ ಹಾಗೂ ಗಾತ್ರ 66 * 135 ಮಿ.ಮೀ ಇರುತ್ತದೆ.