ನವದೆಹಲಿ: ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರಿವರ್ಸ್ ರೆಪೊ ದರದಲ್ಲಿ ಕೂಡ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೆಪೊ ದರ ಶೇಕಡ 4 ರಷ್ಟು ಮತ್ತು ರಿವರ್ಸ್ ರೆಪೊ ದರ ಶೇಕಡಾ 3.35 ರಷ್ಟು ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಬಡ್ಡಿದರಗಳನ್ನು ಬದಲಿಸದೇ ಉಳಿಸಿಕೊಂಡಿದ್ದು, ಸತತ ನಾಲ್ಕನೇ ಬಾರಿಗೆ ಈ ಕ್ರಮ ಅನುಸರಿಸಲಾಗಿದೆ. ಹಣದುಬ್ಬರವನ್ನು ಉದ್ದೇಶಿತ ಮಟ್ಟದಲ್ಲಿಡಲು ಕೇಂದ್ರೀಯ ಹಣಕಾಸು ನೀತಿ ನಿಲುವುಗಳನ್ನು ಕಾಪಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.