ಮುಂಬೈ: ಹಣದುಬ್ಬರ ನಿಯಂತ್ರಣದಲ್ಲಿರುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆ ತೃಪ್ತಿಕರವಾಗಿರುವುದರಿಂದ ಶೇಕಡ 6.5 ರಷ್ಟು ಬಡ್ಡಿ ದರವನ್ನು ಆರ್‌ಬಿಐ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವಾರ ಅಂತ್ಯದಲ್ಲಿ ಆರ್.ಬಿ.ಐ. ಆರ್ಥಿಕ ನೀತಿ ಪರಿಶೀಲನ ಸಭೆ ನಡೆಯಲಿದ್ದು, ಅಲ್ಪಾವಧಿ ಬಡ್ಡಿ ದರದ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವ ಸಂಭವವಿದೆ. ಈ ಹಿಂದಿನ ನಾಲ್ಕು ಪಾಕ್ಷಿಕ ಸಭೆಗಳಲ್ಲಿ ಆರ್‌ಬಿಐ ಮಹತ್ವದ ರೆಪೊ ದರ ಬದಲಾವಣೆ ಮಾಡಿರಲಿಲ್ಲ. ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ರೆಪೊ ದರವನ್ನು ಶೇಕಡ 6.5ಕ್ಕೆ ಏರಿಕೆ ಮಾಡಲಾಗಿತ್ತು.