ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಆರ್‌ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಿ ಬಡ್ಡಿದರ ಏರಿಕೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 28 ರಿಂದ 30ರವರೆಗೆ ಆರ್.ಬಿ.ಐ. ಆರ್ಥಿಕ ಪರಾಮರ್ಶೆ ಸಭೆ ನಡೆಯಲಿದ್ದು, ಸಭೆಯಲ್ಲಿ ರೆಪೊ ದರವನ್ನು ಶೇಕಡ 0.35 ರಿಂದ ಗರಿಷ್ಠ ಶೇಕಡ 0.50 ವರೆಗೂ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹಾಲಿ ಶೇಕಡ 5.40 ರಷ್ಟು ರೆಪೊ ದರ ಶೇಕಡ 5.90 ವರೆಗೂ ತಲುಪಬಹುದು.
ಕಳೆದ ಮೇ, ಜೂನ್, ಆಗಸ್ಟ್ ನಲ್ಲಿ ರೆಪೊ ದರವನ್ನು ಒಟ್ಟು ಶೇಕಡ 1.40ರಷ್ಟು ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಎಲ್ಲಾ ರೀತಿಯ ಸಾಲದ ಬಡ್ಡಿದರಗಳು ಹೆಚ್ಚಳವಾಗಿದೆ. ನಿಶ್ಚಿತ ಠೇವಣಿ, ಉಳಿತಾಯ ಠೇವಣಿ ಬಡ್ಡಿ ದರ ಕೂಡ ಸ್ವಲ್ಪ ಹೆಚ್ಚಾಗಿದೆ.