ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ ಆರ್ಥಿಕ ಪರಾಮರ್ಶೆ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಸಭೆಯಲ್ಲಿ ರೆಪೊ ದರವನ್ನು ಶೇಕಡ 0.35 ರಷ್ಟು ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಆಗಸ್ಟ್ 5 ರಂದು ರೆಪೊ ದರ ಹೆಚ್ಚಳದ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಸಾಲ ಮತ್ತೆ ದುಬಾರಿಯಾಗಲಿದೆ.
ಎಲ್ಲಾ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗಲಿದ್ದು, ಇಎಂಐ ದುಬಾರಿಯಾಗಲಿದೆ. ಠೇವಣಿದಾರರಿಗೆ ಅನುಕೂಲವಾಗಲಿದೆ. ಕಳೆದ ಮೇ ನಲ್ಲಿ ಶೇಕಡ 0.40 ಜೂನ್ ನಲ್ಲಿ 0.50 ರಷ್ಟು ರೆಪೊ ದರ ಏರಿಕೆ ಮಾಡಲಾಗಿದ್ದು ಇದರ ಬೆನ್ನಲ್ಲೇ ಎಲ್ಲ ಬ್ಯಾಂಕುಗಳಲ್ಲಿ ಬಡ್ಡಿ ದರ ಏರಿಕೆಯಾಗಿತ್ತು.