ಪ್ರಸಿದ್ಧ ಕಾರು ತಯಾರಿಕಾ ಕಂಪನಿಗಳಲ್ಲೊಂದಾದ ರೆನಾಲ್ಟ್ ತನ್ನ ಸಂಪೂರ್ಣ ಮಾಡೆಲ್ ರೇಂಜ್ನ ಬೆಲೆಯಲ್ಲಿ 28 ಸಾವಿರ ರೂಪಾಯಿ ಏರಿಕೆ ಮಾಡೋದಾಗಿ ಹೇಳಿದೆ. ಮುಂದಿನ ವರ್ಷದ ಜನವರಿಯಿಂದ ಈ ಹೊಸ ಬೆಲೆ ಅನ್ವಯವಾಗಲಿದೆ. ಕ್ವಿಡ್, ಡಸ್ಟರ್, ಟ್ರೈಬರ್ ಸೇರಿದಂತೆ ಸಾಕಷ್ಟು ಪ್ರಸಿದ್ದ ಕಾರುಗಳನ್ನ ರೆನಾಲ್ಟ್ ಮಾರುಕಟ್ಟೆಗೆ ಪರಿಚಯಿಸಿದೆ.
ಕಾರು ತಯಾರಿಕೆಗೆ ಬಳಕೆ ಮಾಡಲಾಗುವ ಸ್ಟೀಲ್, ಆಲ್ಯಮಿನಿಯಂ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿರೋದ್ರಿಂದ ಕಾರಿನ ಬೆಲೆ ಏರಿಕೆ ಮಾಡೋದು ಅನಿವಾರ್ಯವಾಗಿದೆ ಅಂತಾ ರೆನಾಲ್ಟ್ ಇಂಡಿಯಾ ಮಾಹಿತಿ ನೀಡಿದೆ.
ವಾಹನ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ್ದರಿಂದ ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ ಹಾಗೂ ಮಹೀಂದ್ರಾ & ಮಹೀಂದ್ರಾ ಮುಂದಿನ ವರ್ಷದಿಂದ ತಮ್ಮ ಉತ್ಪನ್ನಗಳ ಮೇಲೆ ಬೆಲೆ ಹೆಚ್ಚಿಸೋದಾಗಿ ಈಗಾಗಲೇ ಘೋಷಣೆ ಮಾಡಿವೆ.
ಇದೀಗ ಈ ಸಾಲಿಗೆ ರೆನಾಲ್ಟ್ ಕಂಪನಿ ಕೂಡ ಸೇರಿದೆ. ಈ ವಾರದ ಆರಂಭದಲ್ಲಿ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಜನವರಿ 1 ರಿಂದ ತನ್ನ ವಾಹನಗಳ ಬೆಲೆಯಲ್ಲಿ 1500 ರೂಪಾಯಿ ಏರಿಕೆ ಮಾಡೋದಾಗಿ ಹೇಳಿತ್ತು.