ಮುಂಬೈ: ರಿಲಯನ್ಸ್ ಕಂಪನಿಯ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಲಸಿಕೆ ಪಡೆಯಲು ವೆಚ್ಚ ನೀಡಲಾಗುವುದು ಎಂದು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ತಿಳಿಸಿದ್ದಾರೆ.
ನೌಕರರಿಗೆ ಇ -ಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, ರಿಲಯನ್ಸ್ ಗ್ರೂಪ್ ನ ಎಲ್ಲ ಉದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಕಂಪನಿಯ ಉದ್ಯೋಗಿ, ಅವರ ಪತ್ನಿ, ಪತಿ, ಪೋಷಕರು, ಮಕ್ಕಳಿಗೆ ಲಸಿಕೆಯ ಸಂಪೂರ್ಣ ವೆಚ್ಚವನ್ನು ರಿಲಯನ್ಸ್ ಕಂಪನಿ ಭರಿಸಲಿದೆ. ನಮ್ಮ ಕುಟುಂಬದವರ ಆರೋಗ್ಯ ಮತ್ತು ಸಂತೋಷಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಸುರಕ್ಷತೆ ಮತ್ತು ನೈರ್ಮಲ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದನ್ನು ಮುಂದುವರೆಸಬೇಕಿದೆ. ಕೊರೊನಾ ನಿರ್ಮೂಲನೆಯ ಕೊನೆಯ ಹಂತದಲ್ಲಿದ್ದು, ಇದರ ವಿರುದ್ಧ ಗೆಲ್ಲಲು ಲಸಿಕೆ ಅವಶ್ಯಕ ಎಂದು ಅವರು ಹೇಳಿದ್ದಾರೆ.