ರಿಲಾಯನ್ಸ್ ಜಿಯೋ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಇದಕ್ಕೆ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಎಂದು ಹೆಸರಿಟ್ಟಿದೆ. ಬೇರೆ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಲು ಕಂಪನಿ ಈ ಯೋಜನೆ ಶುರು ಮಾಡಿದೆ. ಈ ಪ್ಲಾನ್ ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಉಚಿತವಾಗಿ ಸಿಗಲಿದೆ.
ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಆನಂದಿಸಬಯಸುವ ಇತರ ಟೆಲಿಕಾಂ ಕಂಪನಿಗಳ ಬಳಕೆದಾರರು ತಮ್ಮ ಸಾಲದ ಮಿತಿಯನ್ನು ಕ್ಯಾರಿ-ಫಾರ್ವರ್ಡ್ ಮಾಡಬಹುದೆಂದು ಜಿಯೋ ಘೋಷಣೆ ಮಾಡಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ಹೇಳಿದೆ.
ಕಂಪನಿಯು ಹೊಸ ಸಿಮ್ ಕಾರ್ಡ್‌ಗಳನ್ನು ಉಚಿತವಾಗಿ ಮನೆಗೆ ತಲುಪಿಸುತ್ತಿದೆ. ಪ್ರಿಪೇಯ್ಡ್ ಸಂಪರ್ಕದ ಮೂಲಕ ಪೋಸ್ಟ್ ಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಜೊತೆಗೆ ಪೋಸ್ಟ್ ಪೇಯ್ಡ್ ಪ್ಲಸ್ ಪಡೆಯುವ ಆಯ್ಕೆಯನ್ನು ಸಹ ಕಂಪನಿ ನೀಡಿದೆ.
ಜಿಯೋ ಪೋಸ್ಟ್ ಪೇಯ್ಡ್ ಗೆ ಬದಲಾಗಬೇಕೆಂದ್ರೆ 8850188501 ನಂಬರ್ ಗೆ ಹಾಯ್ ಎಂದು ಕಳುಹಿಸಬೇಕು. ನಂತ್ರ ಆಪರೇಟರ್‌ಗಳ ಪೋಸ್ಟ್ ಪೇಯ್ಡ್ ಬಿಲ್ ಅಪ್‌ಲೋಡ್ ಮಾಡಿ.
ಜಿಯೋ ಪೋಸ್ಟ್ ಪೇಯ್ಡ್ ಸಂಪರ್ಕಕ್ಕಾಗಿ ಹೊಸ ಜಿಯೋ ಸಿಮ್‌ನ ವಿತರಣೆಗಾಗಿ ಜಿಯೋ ವೆಬ್‌ಸೈಟ್ ಅಥವಾ 1800 8899 8899 ಸಂಖ್ಯೆಗೆ ಕರೆ ಮಾಡಬೇಕು. ಈ ನಂತರ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಸಿಮ್ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ. ಜಿಯೋ ಸ್ಟೋರ್ ಅಥವಾ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗೆ ಹೋಗುವ ಮೂಲಕ ನೀವು ಸಿಮ್ ಕಾರ್ಡ್ ಪಡೆಯಬಹುದು.
Www.jio.com/postpaid ಗೆ ಭೇಟಿ ನೀಡುವ ಮೂಲಕ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಹ ಪಡೆಯಬಹುದು. ಜಿಯೋ 399, 599, 799, 999 ಮತ್ತು 1,499 ರೂಪಾಯಿಗಳ 5 ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.