ನವದೆಹಲಿ: ಜಿಯೋ ಪ್ಲಾಟ್ ಫಾರಂ, ಗೂಗಲ್ ಕಂಪನಿ ಜೊತೆಯಾಗಿ ಜಿಯೋ ನೆಕ್ಸ್ಟ್ ಗೆ ಪ್ರಗತಿ ಒಎಸ್ ಅಭಿವೃದ್ಧಿಪಡಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.
ಜಿಯೋ ಕಂಪನಿಯಿಂದ ಬಿಡುಗಡೆ ಮಾಡಲಾಗಿರುವ ಮಾಹಿತಿಯ ಪ್ರಕಾರ, ಪ್ರಗತಿ ಒಎಸ್ ಆಂಡ್ರಾಯ್ಡ್ ನಿಂದ ಚಾಲಿತವಾಗಿದ್ದು, ಜಿಯೋ ಮತ್ತು ಗೂಗಲ್ ನಲ್ಲಿರುವ ಮನಸುಗಳನ್ನು ಒಟ್ಟುಗೂಡಿಸಲಿದೆ ಎಂದು ಹೇಳಲಾಗಿದೆ.
ರಿಲಯನ್ಸ್ ಜಿಯೋ ಸ್ಮಾರ್ಟ್‌ಫೋನ್ ರಿಲಯನ್ಸ್ ಜಿಯೋಫೋನ್ ನೆಕ್ಸ್ಟ್ ಗೂಗಲ್‌ನ ಆಂಡ್ರಾಯ್ಡ್ ನಿಂದ ನಡೆಸಲ್ಪಡುವ ಪ್ರಗತಿ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಘೋಷಿಸಿದ್ದು, ಮೊಬೈಲ್ ಸಾಫ್ಟ್ ವೇರ್ ಎಲ್ಲಾ ಬಳಕೆದಾರರಿಗೆ ಅನುಕೂಲವಾಗುವಂತೆ ಕೈಗೆಟುಕುವ ವೆಚ್ಚದಲ್ಲಿ ತಡೆರಹಿತ ಅನುಭವವನ್ನು ನೀಡುತ್ತದೆ. ದೀಪಾವಳಿಗೆ ಮುಂಚಿತವಾಗಿ ಬಿಡುಗಡೆಯಾದ ‘ಮೇಕಿಂಗ್ ಆಫ್ ಜಿಯೋಫೋನ್ ನೆಕ್ಸ್ಟ್’ ಎಂಬ ಪ್ರಚಾರದ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಕ್ವಾಲ್ಕಾಮ್ ಮೊಬೈಲ್ ಪ್ರೊಸೆಸರ್ ಜೊತೆಗೆ ಪ್ರಗತಿ ಓಎಸ್ ಅನ್ನು ಒಳಗೊಂಡಿರುವ ಜಿಯೋಫೋನ್ ನೆಕ್ಸ್ಟ್ ಸಾಧನದ ಕಾರ್ಯಕ್ಷಮತೆ, ಆಡಿಯೋ ಮತ್ತು ಬ್ಯಾಟರಿಯನ್ನು ಉತ್ತಮಗೊಳಿಸುತ್ತದೆ.
ಜಿಯೋ ಫೋನ್ ನೆಕ್ಸ್ಟ್ ನಲ್ಲಿ ಹತ್ತು ಭಾರತೀಯ ಭಾಷೆಗಳಿಗೆ ಅನುವಾದಿಸುವ ವೈಶಿಷ್ಟ್ಯ ಹೊಂದಿದ್ದು, JioPhone Next ಬಳಕೆದಾರರಿಗೆ ಸಾಧನ ನಿರ್ವಹಿಸಲು ಸಹಾಯ ಮಾಡಲು ಧ್ವನಿ ಸಹಾಯಕವನ್ನು ಒಳಗೊಂಡಿರುತ್ತದೆ. ಪರಿಚಿತ ಭಾಷೆಯಲ್ಲಿ ಇಂಟರ್ನೆಟ್‌ನಿಂದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.