ರಿಲಯನ್ಸ್ ಜಿಯೋ ಅಗ್ಗದ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳು ಅಗ್ಗವಾಗಿವೆ.
ಜಿಯೋದ ದೀರ್ಘಾವಧಿ ಯೋಜನೆ 1,299 ರೂಪಾಯಿಗಳಿಂದ ಪ್ರಾರಂಭವಾಗಿ 2,599 ರೂಪಾಯಿವರೆಗಿದೆ. ಕೆಲ ಯೋಜನೆಗಳು 336 ದಿನಗಳ ಸಿಂಧುತ್ವ ಹೊಂದಿದ್ದರೆ ಮತ್ತೆ ಕೆಲ ಯೋಜನೆಗಳು 365 ದಿನಗಳ ಸಿಂಧುತ್ವ ಹೊಂದಿದೆ.
ಜಿಯೋದ 2,121 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇದರಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಸಿಗ್ತಿದೆ. 2,399 ರೂಪಾಯಿ ರೀಚಾರ್ಜ್‌ನಲ್ಲಿ 365 ದಿನಗಳವರೆಗೆ ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದೆ. 2,121 ರೂಪಾಯಿಗಳ ಯೋಜನೆ ಮತ್ತು 2,399 ರೂಪಾಯಿಗಳ ಯೋಜನೆ ನಡುವಿನ ವ್ಯತ್ಯಾಸವೇನು ಎಂಬ ಮಾಹಿತಿ ಇಲ್ಲಿದೆ.
ಜಿಯೋದ 2121 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 1.5 ಜಿಬಿ ಡೇಟಾ ಮತ್ತು 336 ದಿನಗಳವರೆಗೆ ದಿನಕ್ಕೆ 100 ಎಸ್‌ಎಂಎಸ್ ಸಿಗಲಿದೆ. ಈ ಯೋಜನೆಯಲ್ಲಿ ಒಟ್ಟು 504 ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ಮುಗಿದ ನಂತರ ಬಳಕೆದಾರರು ದಿನಕ್ಕೆ 64 ಕೆಬಿಪಿಎಸ್ ಡೇಟಾವನ್ನು ಬ್ರೌಸ್ ಮಾಡಬಹುದು. ಈ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಂತಹ ಯಾವುದೇ ಒಟಿಟಿ ಚಂದಾದಾರಿಕೆಯನ್ನು ನೀಡುವುದಿಲ್ಲ. ಆದರೆ ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳು ಉಚಿತ.
ಜಿಯೋದ 2,399 ರೂಪಾಯಿಗಳ ಪ್ರಿಪೇಯ್ಡ್ ಯೋಜನೆ 365 ದಿನಗಳ ಸಿಂಧುತ್ವ ಹೊಂದಿದೆ. ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಿಗಲಿದೆ. 2,121 ರೂಪಾಯಿಗಳ ಪ್ರಿಪೇಯ್ಡ್ ರೀಚಾಜ್ ನಂತೆ ಈ ಯೋಜನೆಯು 2 ಜಿಬಿ ದೈನಂದಿನ ಡೇಟಾ ಲಾಭದ ನಂತರ 64 ಕೆಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ ನೀಡುತ್ತದೆ. ಬಳಕೆದಾರರು ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಜಿಯೋ ಅಪ್ಲಿಕೇಷನ್ ಪಡೆಯಬಹುದು.
ಜಿಯೋನ ಈ ಎರಡೂ ಯೋಜನೆಗಳಲ್ಲಿ ಯಾರು ಉತ್ತಮ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಹೆಚ್ಚಿನ ಬೆಲೆಯ ಹೊರತಾಗಿಯೂ ವಾರ್ಷಿಕ 2,399 ರೂಪಾಯಿ ಯೋಜನೆ ಬೆಸ್ಟ್. ಏಕೆಂದರೆ ಇದು ದಿನಕ್ಕೆ 2 ಜಿಬಿ ಡೇಟಾವನ್ನು ಮಾತ್ರ ನೀಡುವುದಿಲ್ಲ. ಇದ್ರ ಸಿಂಧುತ್ವ 365 ದಿನಗಳವರೆಗೆ ಲಭ್ಯವಿರುತ್ತದೆ. 2,121 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯನ್ನು ಆರಿಸಿದರೆ, ವರ್ಷ ಮುಗಿಯುವ ಮೊದಲೇ ನೀವು ಬೇರೆ ಪ್ಲಾನ್ ರಿಚಾರ್ಜ್ ಮಾಡಬೇಕು.