ರಿಲಯನ್ಸ್ ಜಿಯೋನ ಆನ್‌ಲೈನ್ ಕಿರಾಣಿ ಪ್ಲಾಟ್‌ಫಾರ್ಮ್ ಜಿಯೋ ಮಾರ್ಟ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ಕೆಲವೇ ದಿನಗಳಲ್ಲಿ ಬಂದ ಈ ಅಪ್ಲಿಕೇಷನ್ ಗೆ ಉತ್ತಮ ರಿಸ್ಪಾನ್ಸ್ ಸಿಕ್ತಿದೆ. ಈವರೆಗೆ 10 ಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಜಿಯೋನ ಹೊಸ ಅಪ್ಲಿಕೇಶನ್ ಶಾಪಿಂಗ್ ವಿಭಾಗವು ಆಪಲ್ ಆಪ್ ಸ್ಟೋರ್‌ನಲ್ಲಿ ಎರಡನೇ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ.
ಬೀಟಾ ಪ್ಲಾಟ್‌ಫಾರ್ಮ್ jiomart.com ಅನ್ನು ಮಾರ್ಚ್ ಅಂತ್ಯದಲ್ಲಿ ದೇಶದ ಸುಮಾರು 200 ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಾರಂಭಿಸಲಾಗಿದೆ. ಆನ್‌ಲೈನ್ ಶಾಪಿಂಗ್ ಅಂಗಡಿಗಳಂತೆ ಇದನ್ನು ಕಿರಾಣಿ ಮತ್ತು ಇತರ ಸರಕುಗಳಿಗಾಗಿ ಶಾಪಿಂಗ್ ಮಾಡಲು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ರಿಲಯನ್ಸ್ ಆ್ಯಪ್ ಬಿಡುಗಡೆ ಮಾಡಿದೆ. ಗ್ರಾಹಕರು ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.