ನವದೆಹಲಿ: ರಿಲಯನ್ಸ್ ಜಿಯೋದಿಂದ ತುರ್ತು ಡೇಟಾ ಸಾಲ ಯೋಜನೆಯನ್ನು ಪ್ರಕಟಿಸಲಾಗಿದೆ. ರಿಲಯನ್ಸ್ ಜಿಯೋ ಕಂಪನಿಯ ಪ್ರಿಪೇಯ್ಡ್ ಗ್ರಾಹಕರಿಗೆ ರಿಚಾರ್ಜ್ ಮಾಡಿದ ನಂತರ ಪಾವತಿಸುವ ಡೇಟಾ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.
ಮೈ ಜಿಯೋ ಆಪ್ ಮೂಲಕ ತುರ್ತು ಡೇಟಾ ಸಾಲ ಪಡೆಯಬಹುದಾಗಿದೆ. 11 ರೂಪಾಯಿಗೆ 1 ಜಿಬಿ ಡೇಟಾ ಸಿಗಲಿದೆ. ಐದು ಬಾರಿ ತುರ್ತು ಡೇಟಾ ಸಾಲ ಪಡೆಯಬಹುದಾಗಿದೆ. ಅನೇಕ ಗ್ರಾಹಕರಿಗೆ ತಕ್ಷಣವೇ ಡೇಟಾ ಅಪ್ ಖರೀದಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, 11 ರೂಪಾಯಿಗೆ 1ಜಿಬಿ ತುರ್ತು ಡೇಟಾ ಸಾಲ ಯೋಜನೆ ಪ್ರಕಟಿಸಲಾಗಿದೆ.