ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಮೊಬೈಲ್ ಬಳಕೆದಾರರನ್ನು ಆಕರ್ಷಿಸಲು ಟೆಲಿಕಾಂ ಕಂಪನಿಗಳು ಅನೇಕ ಅಗ್ಗದ ಪ್ಲಾನ್ ಗಳನ್ನು ನೀಡ್ತಿರುತ್ತವೆ. ಅಗ್ಗದ ಪ್ಲಾನ್ ನೀಡುವುದ್ರಲ್ಲಿ ರಿಲಾಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ರಿಲಾಯನ್ಸ್ ಜಿಯೋ ಒಂದು ಜಿಬಿ ಡೇಟಾ ನೀಡಲು ಕೇವಲ 3.5 ರೂಪಾಯಿ ಚಾರ್ಜ್ ಮಾಡ್ತಿದೆ.
ರಿಲಯನ್ಸ್ ಜಿಯೋನ ಈ ಯೋಜನೆಯ ಸಿಂಧುತ್ವವು 84 ದಿನಗಳು. 599 ರೂಪಾಯಿಗಳ ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಸಿಗ್ತಿದೆ. ಈ ಯೋಜನೆಯಲ್ಲಿ 84 ದಿನಗಳವರೆಗೆ 168 ಜಿಬಿ ಡೇಟಾವನ್ನು ಗ್ರಾಹಕರು ಪಡೆಯುತ್ತಾರೆ. ಬಳಕೆದಾರರು 599 ರೂಪಾಯಿಗಳ ಈ ಯೋಜನೆಯಲ್ಲಿ 1 ಜಿಬಿ ಡೇಟಾ ಪಡೆಯಲು ಗ್ರಾಹಕರು ಕೇವಲ 3.57 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
ಜಿಯೋದ ಈ 599 ರೂಪಾಯಿ ಪ್ಲಾನ್, 249 ರೂಪಾಯಿ ಮತ್ತು 444 ರೂಪಾಯಿಗಿಂತ ಅಗ್ಗವಾಗಿದೆ. 444 ರೂಪಾಯಿ ಪ್ಲಾನ್ ಸಿಂಧುತ್ವ 56 ದಿನಗಳು. ಇದರಲ್ಲಿ ಒಟ್ಟು 112 ಜಿಬಿ ಡೇಟಾ ಲಭ್ಯವಿದೆ. ಅಂದ್ರೆ 1 ಜಿಬಿ ಡೇಟಾದ ಬೆಲೆ ಸುಮಾರು 4 ರೂಪಾಯಿಯಾಗುತ್ತದೆ.
599 ರೂಪಾಯಿಗಳ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯ ಸಿಗ್ತಿದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ನಂತಹ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆಯ ಲಾಭವನ್ನು ಇದ್ರಲ್ಲಿ ಗ್ರಾಹಕರು ಪಡೆಯಬಹುದು.