alex Certify ಜಿಯೋ ಹೊಸ ರೀ ಚಾರ್ಜ್‌ ಪ್ಯಾಕ್‌ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಹೊಸ ರೀ ಚಾರ್ಜ್‌ ಪ್ಯಾಕ್‌ ಕುರಿತು ಇಲ್ಲಿದೆ ಮಾಹಿತಿ

ಟೆಲಿಕಾಂ ಸಂಸ್ಥೆಯಲ್ಲಿಯೇ ಮುಂಚೂಣಿ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ವಿವಿಧ ರೀಚಾರ್ಜ್ ಪ್ಯಾಕ್​​ಗಳನ್ನ ತಂದಿದೆ. ಹೊಸ ರೀಚಾರ್ಜ್ ಪ್ಯಾಕ್​ಗಳು ಅನಿಯಮಿತ ಕರೆ, ಇಂಟರ್​ನೆಟ್​ ಡೇಟಾ ಹಾಗೂ ಡಿಸ್ನಿ ಪ್ಲಸ್​ ಚಂದಾದಾರಿಕೆಯನ್ನ ನೀಡಲಿದೆ .

ರಿಲಾಯನ್ಸ್ ಜಿಯೋದ 199 ರೂಪಾಯಿ ಪ್ಯಾಕ್​ನಲ್ಲಿ ನಿಮಗೆ ಪ್ರತಿನಿತ್ಯ 1.5 ಜಿಬಿ ಡೇಟಾ ಸಿಗಲಿದೆ. ಹಾಗೂ ಈ ಪ್ಯಾಕ್​ನ ವ್ಯಾಲಿಡಿಟಿ 28 ದಿನ. ಅಲ್ಲದೇ ಈ ಪ್ಯಾಕ್​ನಲ್ಲಿ ನಿಮಗೆ ಉಳಿದ ನೆಟ್​ವರ್ಕ್​ಗಳಿಗೆ 1 ಸಾವಿರ ನಿಮಿಷ ಉಚಿತ ಕರೆ ಸಿಗಲಿದೆ. ಜಿಯೋ ನೆಟ್​ವರ್ಕ್​ಗೆ ಫ್ರೀ ಕರೆ ಮಾಡಬಹುದಾಗಿದೆ. ಇದೆಲ್ಲದರ ಜೊತೆ ನಿತ್ಯ 100 ಉಚಿತ ಎಸ್​ಎಂಎಸ್​ ಹಾಗೂ ಜಿಯೋ ಮೊಬೈಲ್​ ಅಪ್ಲಿಕೇಷನ್​ಗೆ ಉಚಿತ ಚಂದಾದಾರಿಕೆ ಸಿಗಲಿದೆ .

ರಿಲಾಯನ್ಸ್ ಜಿಯೋದ 399 ರೂಪಾಯಿ ಪ್ಲಾನ್​​ನಲ್ಲಿ 1.5 ಜಿಬಿ ಉಚಿತ ಇಂಟರ್ನೆಟ್​ ಸಿಗಲಿದ್ದು ಇದರ ವ್ಯಾಲಿಡಿಟಿ 56 ದಿನ ಇರಲಿದೆ. ಜಿಯೋ ನೆಟ್​ವೆರ್ಕ್​ಗೆ ಉಚಿತ ಕರೆ ಉಳಿದ ನೆಟ್​ವರ್ಕ್​ಗಳಿಗೆ 2 ಸಾವಿರ ನಿಮಿಷ ಉಚಿತ ಕರೆ ಸಿಗಲಿದೆ. ಈ ಪ್ಯಾಕ್​ನಲ್ಲೂ ನಿತ್ಯ 100 ಉಚಿತ ಎಸ್​ಎಂಎಸ್​ ಹಾಗೂ ಜಿಯೋ ಮೊಬೈಲ್​ ಅಪ್ಲಿಕೇಷನ್​ಗೆ ಉಚಿತ ಚಂದಾದಾರಿಕೆ ಸಿಗಲಿದೆ .

ರಿಲಾಯನ್ಸ್ ಜಿಯೋದ 555 ರೂಪಾಯಿ ರೀಚಾರ್ಜ್​ನಲ್ಲಿ ನಿತ್ಯ 1.5 ಜಿಬಿ ಇಂಟರ್ನೆಟ್​ ಡೇಟಾ ಸಿಗಲಿದ್ದು ಇದರ ವ್ಯಾಲಿಡಿಟಿ 84 ದಿನಗಳವರೆಗೆ ಇರಲಿದೆ. ಜಿಯೋ ನೆಟ್​​ವರ್ಕ್​ಗೆ ಅನಿಯಮಿತ ಹಾಗೂ ಉಳಿದ ನೆಟ್​​ವರ್ಕ್​ ಗೆ 3 ಸಾವಿರ ನಿಮಿಷ ಉಚಿತ ಕರೆ ಸಿಗಲಿದೆ. ಈ ಪ್ಯಾಕ್​ನಲ್ಲೂ ನಿತ್ಯ 100 ಉಚಿತ ಎಸ್ಎಂಎಸ್​ ಹಾಗೂ ಜಿಯೋ ಮೊಬೈಲ್​ ಅಪ್ಲಿಕೇಷನ್​ಗೆ ಉಚಿತ ಚಂದಾದಾರಿಕೆ ಸಿಗಲಿದೆ.

ರಿಲಾಯನ್ಸ್ ಜಿಯೋದ 777 ರೂಪಾಯಿ ರೀಚಾರ್ಜ್​ ಪ್ಯಾಕ್​​ನಲ್ಲಿ ನಿತ್ಯ 1.5 ಜಿಬಿ ಇಂಟರ್ನೆಟ್​ ಡೇಟಾ ಸಿಗಲಿದೆ ಇದರ ವ್ಯಾಲಿಡಿಟಿ ಕೂಡ 84 ದಿನವಾಗಿದೆ. ಇದರಲ್ಲಿ 399 ರೂಪಾಯಿ ಮೌಲ್ಯದ ಡಿಸ್ನಿ ಪ್ಲಸ್​​ ಹಾಟ್​ಸ್ಟಾರ್​​ನ ಒಂದು ವರ್ಷದ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಉಳಿದಂತೆ ಮಿಕ್ಕೆಲ್ಲ ಸೌಲಭ್ಯಗಳು 555 ರೂಪಾಯಿ ರೀಚಾರ್ಜ್ ಪ್ಲಾನ್​ನಂತೆ ಇರಲಿದೆ.

ರಿಲಾಯನ್ಸ್ ಜಿಯೋದ 2121 ರೂಪಾಯಿ ಪ್ಲಾನ್​​ನಲ್ಲಿ 1.5 ಜಿಬಿ ಇಂಟರ್ನಟ್​ ಡೇಟಾ ಇರಲಿದ್ದು ಇದರ ವ್ಯಾಲಿಡಿಟಿ 1 ವರ್ಷದ್ದಾಗಿದೆ . ಜಿಯೋ ನೆಟ್​ವರ್ಕ್​ಗೆ ಉಚಿತ ಹಾಗೂ ಇತರೆ ನೆಟ್​​ವರ್ಕ್​ಗೆ 12 ಸಾವಿರ ನಿಮಿಷ ಉಚಿತ ಕರೆ ಸಿಗಲಿದೆ. ಈ ಪ್ಯಾಕ್​ನಲ್ಲೂ ನಿತ್ಯ 100 ಉಚಿತ ಎಸ್​ಎಂಎಸ್​ ಹಾಗೂ ಜಿಯೋ ಮೊಬೈಲ್​ ಅಪ್ಲಿಕೇಷನ್​ಗೆ ಉಚಿತ ಚಂದಾದಾರಿಕೆ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...