
ಮುಂಬೈ: ಸಾಲ ಮರುಪಾವತಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಲಿ. ಕಂಪನಿ ಆಡಳಿತ ಮಂಡಳಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಪರ್ ಸೀಡ್ ಮಾಡಿದೆ.
ನಿರ್ದೇಶಕರ ಮಂಡಳಿ ಸಮರ್ಪಕವಾಗಿ ಆಡಳಿತ ನಿರ್ವಹಿಸುವಲ್ಲಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಮತ್ತು ಸಾಲ ಮರು ಪಾವತಿಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸೂಪರ್ ಸೀಡ್ ಮಾಡಲಾಗಿದ್ದು, ಆಡಳಿತಾಧಿಕಾರಿಯಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರರಾವ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿದೆ.
ರಿಲಯನ್ಸ್ ಕ್ಯಾಪಿಟಲ್ ಕಂಪನಿ ವಿರುದ್ಧ ದಿವಾಳಿ ಕಾಯ್ದೆ ಅನ್ವಯ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ ದಿವಾಳಿ ನಿಯಮಗಳನ್ವಯ ರಿಲಯನ್ಸ್ ಆಸ್ತಿಯನ್ನು ವಿಲೇ ಮಾಡಲು RBI ನಿಂದ ಕೋರಲಾಗಿದೆ.
ರಿಲಯನ್ಸ್ ಕ್ಯಾಪಿಟಲ್ HDFC ಮತ್ತು ಆಕ್ಸಿಸ್ ಬ್ಯಾಂಕುಗಳಿಂದ 624 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದನ್ನು ಮರುಪಾವತಿಸುವ ವಿಫಲವಾಗಿದೆ. ಈ ಕಾರಣದಿಂದ ಸೂಪರ್ ಸೀಡ್ ಮಾಡಲಾಗಿದೆ.