ಬೆಂಗಳೂರು: ಪ್ಲಾಟ್ ಖರೀದಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಬಿಲ್ಡರ್ ನಿಂದ ನೇರ ಖರೀದಿಯ ಮೊದಲ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇಕಡ 5 ರಿಂದ ಶೇಕಡ 3 ಕ್ಕೆ ಇಳಿಕೆ ಮಾಡಲಾಗಿದೆ.
2020 -21 ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ 35 ಲಕ್ಷ ರೂ.ನಿಂದ 45 ಲಕ್ಷ ರೂ.ವರೆಗಿನ ಫ್ಲಾಟ್ ಖರೀದಿ ನೋಂದಣಿ ಮುದ್ರಾಂಕ ಶುಲ್ಕ ಇಳಿಕೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ ಇದರಿಂದ ಬಡವರು, ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಗರ ಭಾಗಗಳಲ್ಲಿ ಅಪಾರ್ಟ್ಮೆಂಟ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಾವಿರಾರು ಫ್ಲ್ಯಾಟ್ ಗಳನ್ನು ಬಡವರು, ಮಧ್ಯಮವರ್ಗದವರಿಗೆ ನೀಡಲಾಗುತ್ತಿದ್ದು ಮುದ್ರಾಂಕ ಶುಲ್ಕ ಇಳಿಕೆ ಮಾಡಿರುವುದರಿಂದ ಈ ವರ್ಗದವರಿಗೆ ಅನುಕೂಲವಾಗಲಿದೆ.
ಹೊಸದಾಗಿ ನಿರ್ಮಾಣಗೊಂಡ ಫ್ಲಾಟ್ ಗಳಲ್ಲಿ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಕಡಿಮೆ ಇರಲಿದೆ. ಪ್ರಸ್ತುತ ಶೇಕಡ 5.6 ರಷ್ಟು ಮುದ್ರಾಂಕ ಶುಲ್ಕ ಮತ್ತು ಶೇಕಡ 1 ರಷ್ಟು ನೋಂದಣಿ ಶುಲ್ಕ ಇದೆ.