ಸ್ಮಾರ್ಟ್ಫೋನ್ ಪ್ರಿಯರಿಗೊಂದು ಖುಷಿ ಸುದ್ದಿಯಿದೆ. ಶಿಯೋಮಿಯ ರೆಡ್‌ಮಿ ಕೆ 20 ಪ್ರೊ ತನ್ನ ಬೆಲೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದೆ. ಗ್ರಾಹಕರು ಭಾರತದಲ್ಲಿ 6 ಜಿಬಿ + 128 ಜಿಬಿ ರೆಡ್ ಮಿ ಕೆ 20 ಮೊಬೈಲನ್ನು 24,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.
ಈ ಮೊದಲು ಈ ಫೋನ್‌ನ ಬೆಲೆ 26,999 ರೂಪಾಯಿಯಿತ್ತು. ಶಿಯೋಮಿ ಇಂಡಿಯಾ ಸಿಇಒ ಮನು ಕುಮಾರ್ ಜೈನ್ ಅವರು ಟ್ವೀಟ್ ಮಾಡುವ ಮೂಲಕ ರೆಡ್ಮಿ ಕೆ 20 ಪ್ರೊ ಬೆಲೆ ಕಡಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದ್ರೆ ಜಿಬಿ + 256 ಜಿಬಿ ಫೋನ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಫೋನ್ 29,999 ರೂಪಾಯಿಗೆ ಸಿಗ್ತಿದೆ. ಜೈನ್ ಜುಲೈ 13ರವರೆಗೆ ಮಾತ್ರ ಆಫರ್ ಇರಲಿದೆ ಎಂದಿದ್ದರು. ಆದ್ರೆ ಮೈ.ಕಾಂನಲ್ಲಿ ಈಗ್ಲೂ ಈ ಆಫರ್ ನಲ್ಲಿಯೇ ಫೋನ್ ಸಿಗ್ತಿದೆ.
ರೆಡ್ಮಿ ಕೆ 20 ಪ್ರೊ 6.39 ಇಂಚಿನ ಪೂರ್ಣ ಎಚ್ಡಿ ಮೊಬೈಲ್ ಆಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಳನ್ನು ಫೋನ್‌ನಲ್ಲಿ ನೀಡಲಾಗಿದೆ. ಈ ಫೋನ್‌ನಲ್ಲಿ ಎಲ್ಲಿಯೂ ನಾಚ್ ಅಥವಾ ಕಟೌಟ್ ಇಲ್ಲ. ಇದನ್ನು ತಪ್ಪಿಸಲು, ಫೋನ್ 20 ಮೆಗಾಪಿಕ್ಸೆಲ್ ಪಾಪ್-ಅಪ್ ಕ್ಯಾಮೆರಾವನ್ನು ಹೊಂದಿದೆ.