ಜೀವನದಲ್ಲಿ ಚಿಪ್ಸ್ ಅನ್ನು ಪ್ರತಿಯೊಬ್ಬರು ತಿಂದೇ ಇರುತ್ತಾರೆ. ಅದರಲ್ಲೂ ಲೇಯ್ಸ್, ಬಿಂಗೋ ಸೇರಿದಂತೆ ಹಲವು ಸಂಸ್ಥೆಯ ಚಿಪ್ಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಷು ಗಾಳಿ ತುಂಬಿರುತ್ತದೆ.
ಆದರೆ ರೆಡಿಟ್ ಬಳಕೆದಾರರೊಬ್ಬರು ಬಿಂಗೋ, ಲೇಯ್ಸ್ ಹಾಗೂ ಹಲ್ದಿರಾಂ ಸಂಸ್ಥೆಗಳ 10 ರುಪಾಯಿ ಪಾಕೇಟ್‌ನಲ್ಲಿ ಚಿಪ್ಸ್ ಎಷ್ಟಿರುತ್ತದೆ ಎಂದು ಪ್ರತ್ಯೇಕ ತಟ್ಟೆಯಲ್ಲಿಟ್ಟು ತೋರಿಸಿದ್ದಾರೆ. ಇದೀಗ ಈ ಫೋಟೋ ಭಾರಿ ವೈರಲ್ ಆಗಿದ್ದು ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಸಾವಿರಕ್ಕೂ ಹೆಚ್ಚು ಲೈಕ್ ಮಾಡಿದ್ದಾರೆ.
ಕೆಲವರು ಇಷ್ಟೊಂದು ತಲೆಕೆಡಿಸಿಕೊಳ್ಳುವ ಬದಲು, ಎಷ್ಟು ತೂಕ ಇರುತ್ತದೆ ಎಂದು ಪ್ಯಾಕೇಟ್ ಹಿಂದೆ ನೋಡಿದ್ದರೆ ತಿಳಿಯುತ್ತಿತ್ತು ಎಂದರೆ, ಇನ್ನು ಕೆಲವರು ಅಂಕಿಯಲ್ಲಿ ನೋಡುವುದಕ್ಕಿಂತ ಈ ರೀತಿ ನೋಡಿದರೆ ಸುಲಭವಾಗಿ ಅರ್ಥವಾಗುತ್ತದೆ ಎಂದಿದ್ದಾರೆ.
ಇನ್ನು ಚಿಪ್ಸ್ ಪ್ಯಾಕ್‌ನಲ್ಲಿ ನೈಟ್ರೋಜನ್ ಗಾಳಿ ತುಂಬುವುದಕ್ಕೆ ಕಾರಣವೆಂದರೆ, ಚಿಪ್ಸ್ ಹಾಳಾಗದಿರಲಿ ಎನ್ನುವ ಉದ್ದೇಶದಿಂದ ಎಂದು ಹೇಳಲಾಗಿದೆ.