ನವದೆಹಲಿ: ಪದವಿ, ಇಂಜಿನಿಯರಿಂಗ್ ಕಾಲೇಜ್, ಬ್ಯುಸಿನೆಸ್ ಸ್ಕೂಲ್ ಗಳಲ್ಲಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.
ಬ್ಯಾಂಕ್ ಗಳು ಹಾಗೂ ಹಣಕಾಸು ಸೇವಾ ಕಂಪನಿಗಳು ದೇಶಾದ್ಯಂತ ಕ್ಯಾಂಪಸ್ ಸಂದರ್ಶನಗಳ ಮೂಲಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿವೆ. ಪದವಿ, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಬ್ಯುಸಿನೆಸ್ ಸ್ಕೂಲ್ ಗಳಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆಗೆ ಪ್ರಮುಖ ಹಣಕಾಸು ಕಂಪನಿಗಳು ಹಾಗೂ ಬ್ಯಾಂಕ್ ಗಳು ಚಾಲನೆ ನೀಡಿವೆ.
ಆಕ್ಸಿಸ್ ಬ್ಯಾಂಕ್ ಈ ವರ್ಷ ನೇಮಕಾತಿಯಲ್ಲಿ ಶೇಕಡ 50 ರಷ್ಟು ಹೆಚ್ಚಳ ಮಾಡಿದೆ. ಗೋಲ್ಡ್ಮನ್ ಸ್ಯಾಕ್ಸ್ ಇಂಡಿಯಾ ಕ್ಯಾಂಪಸ್ ನೇಮಕಾತಿಯನ್ನು ಈ ವರ್ಷ ಶೇಕಡ 27 ಏರಿಸಲು ಮುಂದಾಗಿದ್ದು, ಸುಮಾರು 1900 ಜನರಿಗೆ ಕೆಲಸ ನೀಡಲಿದೆ.
ಸಾಫ್ಟ್ ವೇರ್ ಅಭಿವೃದ್ಧಿ, ಡೇಟಾ ಇಂಜಿನಿಯರಿಂಗ್ ಮೊದಲಾದ ವಲಯದ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪದವಿ ಕಾಲೇಜ್ ಗಳಲ್ಲಿ ಶೇಕಡ 43, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡ 24 ರಷ್ಟು ಮತ್ತು ಬ್ಯುಸಿನೆಸ್ ಸ್ಕೂಲ್ ಗಳಲ್ಲಿ ಶೇಕಡ 6 ರಷ್ಟು ನೇಮಕಾತಿ ಪ್ರಮಾಣ ಹೆಚ್ಚಾಗಲಿದೆ ಎಂದು ಗೋಲ್ಡ್ಮನ್ ಸ್ಯಾಕ್ಸ್ ಇಂಡಿಯಾ ಹೇಳಿದೆ.