ಆರಂಭಿಕ ಬೆಲೆಯ ಮಾರುತಿ ವ್ಯಾಗನ್ಆರ್, ಹ್ಯುಂಡೈ ಸೆಂಟರ್ ಅಥವಾ ಐ 10 ಖರೀದಿಸಲು ಯೋಚಿಸಿದ್ದರೂ ಕನಿಷ್ಠ ಐದು ಲಕ್ಷ ರೂಪಾಯಿ ಖರ್ಚು ಮಾಡಬೇಕು. ಶೋ ರೂಮಿಗೆ ಹೋದಾಗ ಕೆಲ ಡಿಸ್ಕೌಂಟ್ ಸಿಗುವ ವಿಷ್ಯ ಗೊತ್ತಾಗ್ತಿದ್ದಂತೆ ನಾವು ಖುಷಿಯಾಗ್ತೇವೆ. ಜೊತೆಗೆ ಸಣ್ಣಪುಟ್ಟ ಉಡುಗೊರೆ ಸಿಕ್ಕರೆ ಸಂತೋಷಗೊಳ್ತೆವೆ. ಆದ್ರೆ ಐದು ಲಕ್ಷ ನೀಡಿ ಖರೀದಿ ಮಾಡುವ ಕಾರು ತಯಾರಿಸಲು ಎಷ್ಟು ಖರ್ಚಾಗುತ್ತೆ ಎಂಬುದು ಗೊತ್ತಾದ್ರೆ ನೀವು ದಂಗಾಗ್ತಿರ.
ಕಾರು ತಯಾರಿಕಾ ಕಂಪನಿಗಳು ಶೇಕಡಾ 75ರಿಂದ 125ರಷ್ಟು ಲಾಭವನ್ನು ಇಟ್ಟುಕೊಂಡು ಕಾರು ತಯಾರಿಸುತ್ತವೆ. ಕೆಲವೊಮ್ಮೆ ಇದು ಶೇಕಡಾ 200ರಷ್ಟಿರುತ್ತದೆ. ಇದಕ್ಕೆ ಮುಖ್ಯ ಕಾರಣ ಉಕ್ಕಿನ ಬೆಲೆ. ಉಕ್ಕಿನ ಬೆಲೆ ಏರಿಳಿತವಾಗ್ತಿರುವ ಕಾರಣ ಕಾರು ಕಂಪನಿಗಳು ಹೆಚ್ಚಿನ ಲಾಭವನ್ನು ಇಟ್ಟುಕೊಂಡು ಕೆಲಸ ಮಾಡ್ತವೆ. ಕಾರು ತಯಾರಿಸಲು ಶೇಕಡಾ 60ರಷ್ಟು ಉಕ್ಕನ್ನು ಬಳಸಲಾಗುತ್ತದೆ.
ಇನ್ನು ಕಾರಿನ ಮೇಲೆ ಸರ್ಕಾರ ಎಷ್ಟು ತೆರಿಗೆ ವಿಧಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. 1,200 ಸಿಸಿ ಮತ್ತು 1,500 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಮಧ್ಯಮ ಗಾತ್ರದ ಕಾರುಗಳು ಶೇಕಡಾ 18 ಕ್ಕಿಂತ ಹೆಚ್ಚು ಜಿಎಸ್ಟಿ ಮತ್ತು 3 ಶೇಕಡಾ ಸೆಸ್ ನೀಡಬೇಕು. 1,500 ಸಿಸಿಗಿಂತ ದೊಡ್ಡ ಎಂಜಿನ್ ಹೊಂದಿರುವ ಕಾರುಗಳ ಮೇಲೆ ಶೇಕಡಾ 28 ರಷ್ಟು ಜಿಎಸ್ಟಿ ಶೇಕಡಾ 15 ರಷ್ಟು ಸೆಸ್ ವಿಧಿಸಲಾಗುತ್ತದೆ.
ಈಗ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಮುಂದಾಗಿರುವ ಸರ್ಕಾರ, ವಾಹನಗಳ ಭಾಗಗಳು ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಬಜೆಟ್‌ನಲ್ಲಿ ಜಿಎಸ್‌ಟಿ ಮತ್ತು ಸೆಸ್ ಕಡಿಮೆ ಮಾಡಿದೆ. ಕಾರು ಒಂದು ಲಕ್ಷ ಮೌಲ್ಯದ್ದಾಗಿದ್ರೆ, ಸರ್ಕಾರ ಸುಮಾರು 21 ಸಾವಿರ ರೂಪಾಯಿ ಮತ್ತು ದೊಡ್ಡ ಕಾರಿನ ಮೇಲೆ 40 ಸಾವಿರಕ್ಕೂ ಹೆಚ್ಚು ತೆರಿಗೆಯನ್ನು ವಿಧಿಸುತ್ತದೆ. ಕಂಪನಿಯು ವಾಹನದ ಮೇಲೆ 75 ಸಾವಿರ ರೂಪಾಯಿ ಲಾಭವನ್ನು ಸೇರಿಸಿ ಅದರ ಮೇಲೆ 21 ಸಾವಿರ ತೆರಿಗೆಯನ್ನು ತೆಗೆದುಕೊಂಡರೆ ಒಂದು ಲಕ್ಷ ರೂಪಾಯಿ ಮೌಲ್ಯದ ಕಾರಿನ ಬೆಲೆ ಎರಡು ಲಕ್ಷ ರೂಪಾಯಿಯಾಗುತ್ತದೆ. ಇದಲ್ಲದೆ ಶೋ ರೂಂಗೆ ಕಾರನ್ನು ಸಾಗಿಸುವ ವೆಚ್ಚ, ಈ ಕಾರುಗಳ ದಾರಿ ವಿಮೆ ಎಲ್ಲವನ್ನೂ ಸೇರಿಸಲಾಗುತ್ತದೆ.
ಕೇವಲ 50 ಸಾವಿರ ರೂ. ಹೂಡಿಕೆ ಮಾಡಿ ಶುರು ಮಾಡಿ ಈ ಬ್ಯುಸಿನೆಸ್
ಕಾರು ಡಿಲರ್ ಬಳಿ ತಲುಪಿದ ನಂತ್ರ, ಎಂಟ್ರಿ ಲೆವೆಲ್ ಕಾರುಗಳಾದ ಆಲ್ಟೋ, ಕ್ವಿಡ್, ಸೆಂಟ್ರಾ ಇತ್ಯಾದಿಗಳ ಡಿಲರ್ ಗಳಿಗೆ ಕಂಪನಿ 15 ರಿಂದ 18 ಸಾವಿರ ನೀಡುತ್ತದೆ. ಎಸ್‌ಯುವಿ ವಿಭಾಗಕ್ಕೆ ಬಂದ್ರೆ ಈ ಮೊತ್ತ 32 ರಿಂದ 36 ಸಾವಿರಕ್ಕೆ ಹೆಚ್ಚಾಗುತ್ತದೆ, ಡೀಸೆಲ್ ಮತ್ತು ಪೆಟ್ರೆಲ್ ವಾಹನಗಳ ವಿಭಿನ್ನ ಲಾಭವನ್ನು ಕಂಪನಿ ನಿರ್ಧರಿಸುತ್ತದೆ. ಕಾರ್ ಶೋರೂಮಿಗೆ ಹೋಗುವ ಮೊದಲು 2 ಲಕ್ಷವಿದ್ದ ಕಾರಿನ ಬೆಲೆ ಶೋ ರೂಮಿಗೆ ಬಂದ ನಂತ್ರ ಡಿಲರ್ ಲಾಭ ಸೇರಿಸಿ 20 ಸಾವಿರಕ್ಕಿಂತ ಹೆಚ್ಚಾಗುತ್ತದೆ.
ಈಗ ಒಂದು ಲಕ್ಷ ರೂಪಾಯಿ ಕಾರಿನ ಬೆಲೆ ಸುಮಾರು 2 ಲಕ್ಷ 30 ಸಾವಿರವಾಗುತ್ತದೆ. ಶೋ ರೂಂನಿಂದ ಕಾರಿಗೆ ಬಿಡಿಭಾಗಗಳನ್ನು ಖರೀದಿಸುತ್ತಿದ್ದರೆ, ಹತ್ತು ಸಾವಿರ ರೂಪಾಯಿಗಳ ಪರಿಕರಗಳಿಗೆ ಮೂರು ಸಾವಿರ ರೂಪಾಯಿಯಷ್ಟು ಪಾವತಿಸಬೇಕು. ಕಾರು ನೋಂದಣಿ ಶುಲ್ಕವನ್ನು ಆರ್ ಟಿ ಒಗೆ ಪಾವತಿಸಬೇಕಾಗುತ್ತದೆ. ಇದು ಬೇರೆ ಬೇರೆ ವಾಹನಗಳಿಗೆ ಬೇರೆ ಬೇರೆಯಾಗಿರುತ್ತದೆ. ಒಟ್ಟಿನಲ್ಲಿ 1 ಲಕ್ಷಕ್ಕೆ ತಯಾರಾಗುವ ಕಾರು ನಮ್ಮ ಬಳಿ ಬರುವ ವೇಳೆಗೆ ದುಪ್ಪಟ್ಟು ದುಬಾರಿಯಾಗುತ್ತದೆ.