alex Certify ಗಮನಿಸಿ: ಶಾಪಿಂಗ್ ಪ್ರಿಯರಿಗೆ ವಾಟ್ಸಾಪ್ ನೀಡಿದೆ ಈ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಶಾಪಿಂಗ್ ಪ್ರಿಯರಿಗೆ ವಾಟ್ಸಾಪ್ ನೀಡಿದೆ ಈ ಸೌಲಭ್ಯ

2018ರಲ್ಲಿ ವಾಟ್ಸಾಪ್​ ಬಿಸಿನೆಸ್​ ಅಪ್ಲಿಕೇಶನ್​ ಬಿಡುಗಡೆ ಮಾಡುವಾಗ ಫೇಸ್​​ಬುಕ್​ ಮುಂಬರುವ ದಿನಗಳಲ್ಲಿ ಶಾಪಿಂಗ್​​​ಗೆ ಅವಕಾಶ ನೀಡುತ್ತೇವೆ ಅಂತಾ ಭರವಸೆ ನೀಡಿತ್ತು. ಇದೀಗ ತನ್ನ ಮಾತನ್ನ ಉಳಿಸಿಕೊಂಡಿರುವ ಫೇಸ್​ಬುಕ್​ ವಾಟ್ಸಾಪ್​​ ಬ್ಯುಸಿನೆಸ್​​ ಅಪ್ಲಿಕೇಶನ್​ನಲ್ಲಿ ಶಾಪಿಂಗ್​ ಬಟನ್​ ಪರಿಚಯಿಸಿದೆ.

ಜನರ ಅನುಕೂಲತೆಯನ್ನ ಗಮನದಲ್ಲಿಟ್ಟುಕ್ಕೊಂಡು ವಾಟ್ಸಾಪ್​ನಲ್ಲಿ ಹೊಸ ಶಾಪಿಂಗ್​ ಬಟನ್​​ನ್ನ ಪರಿಚಯಿಸಿದ್ದೇವೆ. ಜನರು ಈ ಹಿಂದೆ ಬ್ಯುಸಿನೆಸ್​ ಪ್ರೊಫೈಲ್​​ನಲ್ಲಿ ಕ್ಲಿಕ್​ ಮಾಡಬೇಕಾಗಿತ್ತು. ಆದರೆ ಇದೀಗ ಪ್ರೊಫೈಲ್​​ನಲ್ಲೇ ಐಕಾನ್​ ರೀತಿಯಲ್ಲಿ ಶಾಪಿಂಗ್​ ಬಟನ್​ ಇರಲಿದೆ. ಕೇವಲ ಒಂದು ಕ್ಲಿಕ್​ನಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನ ಬ್ರೌಸ್​ ಮಾಡಬಹುದು ಎಂದು ಕಂಪನಿ ಹೇಳಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ 175 ದಶಲಕ್ಷಕ್ಕೂ ಹೆಚ್ಚು ಜನರು ವಾಟ್ಸಾಪ್​ ಬ್ಯುಸಿನೆಸ್​ ಬಳಕೆ ಮಾಡ್ತಿದ್ದಾರೆ ಹಾಗೂ ಭಾರತದಲ್ಲಿ ಮೂರು ಬಿಲಿಯನ್​​ ಬಳಕೆದಾರರನ್ನ ವಾಟ್ಸಾಪ್​ ಬಿಸಿನೆಸ್​ ಹೊಂದಿದೆ.

ವಾಟ್ಸಾಪ್​ನಲ್ಲಿನ ಶಾಪಿಂಗ್​ ಬಟನ್​ನಿಂದಾಗಿ ಬಳಕೆದಾರರು ವ್ಯವಹಾರ ನಡೆಸಲು ಅಪ್ಲಿಕೇಶನ್​ನಿಂದ ಹೊರಬರಬೇಕು ಎಂದೇನಿಲ್ಲ. ನೇರವಾಗಿ ಉತ್ಪನ್ನಗಳನ್ನ ಕಾರ್ಟ್​ಗೆ ಹಾಕಿಕೊಂಡು ಮೊತ್ತವನ್ನ ಬಿಸಿನೆಸ್​ ಅಪ್ಲಿಕೇಶನ್​ನಲ್ಲಿ ಪಾವತಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...