ಭಾರತೀಯ ರಿಸರ್ವ್ ಬ್ಯಾಂಕ್, ಹೊಸ 100 ರ ನೋಟು ಹೊರ ತರಲು ನಿರ್ಧರಿಸಿದೆ. ಹೊಸ ನೋಟು ಹೊಳೆಯಲಿದ್ದು, ತುಂಬಾ ಬಾಳಿಕೆ ಬರಲಿದೆ. ವಾರ್ನಿಷ್ ಹೊಂದಿರುವ ಈ ನೋಟುಗಳನ್ನು ಮೊದಲು ಪ್ರಯೋಗಾರ್ಥ ಬಿಡುಗಡೆ ಮಾಡಲಾಗುವುದು. ನಂತ್ರ ದೊಡ್ಡ ಪ್ರಮಾಣದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು.
ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ವಾರ್ನಿಷ್ ಬಣ್ಣದಿಂದಾಗಿ ಹೊಸ ನೋಟು ನೀರಿನಲ್ಲಿ ಹರಿದು ಹೋಗುವುದಿಲ್ಲ, ಹಾಳಾಗುವುದಿಲ್ಲವೆಂದು ಹೇಳಿದೆ. ರಿಸರ್ವ್ ಬ್ಯಾಂಕ್ ಪ್ರತಿವರ್ಷ ಲಕ್ಷ ಕೋಟಿ ಮೌಲ್ಯದ ಮಣ್ಣಾದ ಅಥವಾ ಹರಿದ ನೋಟುಗಳನ್ನು ಬದಲಾಯಿಸುತ್ತದೆ. ಈ ಸಮಸ್ಯೆಯನ್ನು ತೊಡೆದುಹಾಕಲು ವಿಶ್ವದ ಅನೇಕ ದೇಶಗಳು ಪ್ಲಾಸ್ಟಿಕ್ ನೋಟುಗಳನ್ನು ಬಳಸುತ್ತಿವೆ. ದೃಷ್ಟಿಹೀನರು ಕೂಡ ಈ ನೋಟುಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ಆರ್ಬಿಐ ಹೇಳಿದೆ.
ವಾರ್ಷಿಕ ವರದಿಯಲ್ಲಿ 100 ರೂಪಾಯಿ ನೋಟಿನ ಜೊತೆಗೆ ಇನ್ನೂ ಕೆಲ ವಿಷ್ಯಗಳನ್ನು ಆರ್ಬಿಐ ಹೇಳಿದೆ. ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರ್ಬಿಐ ಹೇಳಿದೆ.