ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ ಸೈಬರ್ ಸೆಕ್ಯುರಿಟಿ ಉಲ್ಲಂಘನೆ ವರದಿಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಗ್ರಾಹಕರ ಡೇಟಾ ಸಂಗ್ರಹಿಸುವ ಪಾವತಿ ಕಂಪನಿಗಳ ಮೇಲ್ವಿಚಾರಣಾ ಮಾನದಂಡವನ್ನು ಆರ್.ಬಿ.ಐ. ಬಿಗಿಗೊಳಿಸಿದೆ.
ಏಪ್ರಿಲ್ ಒಂದರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಪರವಾನಿಗೆ ಪಡೆದ ಎಲ್ಲ ಪಿಎಸ್ಒಗಳು ವರ್ಷಕ್ಕೆ ಎರಡು ಬಾರಿ ಸಿಇಒ ಅಥವಾ ವ್ಯವಸ್ಥಾಪಕ ನಿರ್ದೇಶಕರು ಸಹಿ ಮಾಡಿದ ಎಲ್ಲ ವಿವರಗಳನ್ನು ಹೊಂದಿರುವ ಅನುಸರಣೆ ಪ್ರಮಾಣಪತ್ರವನ್ನು ಕೇಂದ್ರ ಬ್ಯಾಂಕ್ ಗೆ ನೀಡಬೇಕು.
ಸೆಂಟ್ರಲ್ ಬ್ಯಾಂಕಿನ ಡಿಪಿಎಸ್ಎಸ್, ಎಲ್ಲ ಪಿಎಸ್ಒಗಳಿಗೆ ಪತ್ರ ರವಾನೆ ಮಾಡಿದೆ. ಪ್ರತಿ ವರ್ಷ ಏಪ್ರಿಲ್ 30 ಹಾಗೂ ಅಕ್ಟೋಬರ್ 31ರಂದು ಎಲ್ಲ ಪಿಎಸ್ಒಗಳು ಅನುಸರಣೆ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ. ಎಲ್ಲ ಮಾಹಿತಿಯ ಜೊತೆಗೆ ಸಿಇಒ / ಎಂಡಿ / ಅಧ್ಯಕ್ಷರು ಸಹಿ ಮಾಡಿದ ಅನುಸರಣೆ ಪ್ರಮಾಣಪತ್ರವನ್ನು ನೀಡಬೇಕೆಂದು ಪತ್ರದಲ್ಲಿ ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಟೆಕ್ ಸ್ಟಾರ್ಟ್ಅಪ್‌ಗಳು ಡೇಟಾ ಸುರಕ್ಷತೆ ಸಮಸ್ಯೆಯನ್ನು ಎದುರಿಸಿವೆ. ಗುರುಗ್ರಾಮ್ ಮೂಲದ ಮೊಬಿಕ್ವಿಕ್ ಕೂಡ ಈ ಪಟ್ಟಿಯಲ್ಲಿ ಸೇರಿದೆ.