ಡಿಜಿಟಲ್ ವಹಿವಾಟುದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಕೋಟ್ಯಾಂತರ ಗ್ರಾಹಕರಿಗೆ ಆರ್ಬಿಐ ಎಚ್ಚರಿಕೆ ನೀಡಿದೆ. ಮೇ 23 ರಂದು ಕೆಲವು ಗಂಟೆಗಳ ಕಾಲ ನೆಫ್ಟ್ ಸೇವೆ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ಮೊದಲೇ ಕೆಲಸ ಮುಗಿಸಿಕೊಳ್ಳಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆರ್‌ಬಿಐ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.
ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ ಸಿಸ್ಟಮ್, ಇಡೀ ದೇಶದಲ್ಲಿ ನಡೆಯುವ ಪಾವತಿ ವ್ಯವಸ್ಥೆಯಾಗಿದೆ. ಇದರಲ್ಲಿ ಹಣವನ್ನು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ವರ್ಗಾಯಿಸಲಾಗುತ್ತದೆ. ನೆಫ್ಟ್ ಮೂಲಕ ಗ್ರಾಹಕರು ನಿಮಿಷಗಳಲ್ಲಿ ಹಣವನ್ನು ವರ್ಗಾಯಿಸಬಹುದು. ದೇಶದ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಈ ಸೌಲಭ್ಯದ ಮೂಲಕ ಹಣವನ್ನು ವರ್ಗಾಯಿಸಬಹುದು.
ಮೇ 22ರಂದು ಬ್ಯಾಂಕ್ ಕೆಲಸದ ಸಮಯದ ನಂತ್ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ನೆಫ್ಟ್ ಕೆಲಸ ಮಾಡುವುದಿಲ್ಲ. ಆದ್ರೆ ಆರ್‌ಟಿಜಿಎಸ್ ಸೌಲಭ್ಯ ಮುಂದುವರಿಯಲಿದೆ ಎಂದು ಆರ್ಬಿಐ ಹೇಳಿದೆ. ನೆಫ್ಟ್ ನಲ್ಲಿ ಹಣ ವರ್ಗಾವಣೆಗೆ ಯಾವುದೇ ಮಿತಿಯಿಲ್ಲ. ಆದ್ರೆ ಬ್ಯಾಂಕ್ ನಿಯಮಗಳು ಬೇರೆಯಾಗಿರುತ್ತವೆ. ನೆಫ್ಟ್ ಹೊರತು ಗ್ರಾಹಕರು ಆರ್ಟಿಜಿಎಸ್ ಮತ್ತು ಐಎಂಪಿಎಸ್ ಬಳಸಿ ಹಣವನ್ನು ವರ್ಗಾಯಿಸಬಹುದು.