ಮುಂಬೈ: ಆರ್.ಬಿ.ಐ. ಏಪ್ರಿಲ್ 6 ರಂದು ಪ್ರಕಟಿಸುವ ದ್ವೈಮಾಸಿಕ ಹಣಕಾಸು ಅಂತಿಯಲ್ಲಿ ರೆಪೊ ದರವನ್ನು ಶೇಕಡ 0.25 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಚಿಲ್ಲರೆ ಹಣದುಬ್ಬರ ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದು, ಜಾಗತಿಕ ಬ್ಯಾಂಕುಗಳು ಕಠಿಣ ನಿಲುವು ಮುಂದುವರೆಸಿವೆ. ಈ ಹಿನ್ನೆಲೆಯಲ್ಲಿ ಆರ್.ಬಿ.ಐ. ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 3, 5 ಮತ್ತು 6ರಂದು ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಸೇರಲಿದ್ದು, ಚಿಲ್ಲರೆ ಹಣದುಬ್ಬರ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಸೆಂಟ್ರಲ್ ಬ್ಯಾಂಕ್ ಗಳು ಅಮೆರಿಕದ ಫೆಡರಲ್ ಬ್ಯಾಂಕ್ ಕೈಗೊಂಡ ಇತ್ತೀಚಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಹಣದುಬ್ಬರ ನಿಯಂತ್ರಣಕ್ಕಾಗಿ 2022ರ ಮೇ ತಿಂಗಳಿನಿಂದ ಆರ್.ಬಿ.ಐ. ರೆಪೊ ದರ ಹೆಚ್ಚಿಸುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಶೇಕಡ 0.25 ರಷ್ಟು ರೆಪೋ ದರ ಏರಿಕೆ ಮಾಡಲಾಗಿತ್ತು. ಒಟ್ಟಾರೆ ರೆಪೊ ದರ ಶೇಕಡ 6.50 ಗೆ ತಲುಪಿದೆ. ಮತ್ತೆ ಶೇಕಡ 0.25 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.