ನವದೆಹಲಿ: ಸತತ ಏರಿಕೆ ಕಂಡಿದ್ದ ರೆಪೊ ದರ ಇಂದು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಹಣದುಬ್ಬರ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ಮೂರು ದಿನಗಳ ಹಣಕಾಸು ನೀತಿ ಪರಾಮರ್ಶ ಸಭೆ ಇಂದು ಮುಕ್ತಾಯವಾಗಲಿದ್ದು, ಬಡ್ಡಿ ದರ ಏರಿಕೆ ಕುರಿತಂತೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ರೆಪೊ ದರವನ್ನು ಅಲ್ಪ ಪ್ರಮಾಣದಲ್ಲಿ ಅಂದಾಜು ಶೇಕಡ 0.25ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ರೆಪೊ ದರ ಸತತ ಏರಿಕೆಯಿಂದಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಬಡ್ಡಿದರ ಏರಿಕೆಯಾಗಿ ಇಎಂಐ ಹೊರೆಯಾಗಲಿದೆ.
ಆದರೆ, ರೆಪೊ ಏರಿಕೆ ಮಾಡದಿರುವ ಸಾಧ್ಯತೆ ಕೂಡ ಇದೆ ಎಂದು ಎಸ್.ಬಿ.ಐ. ಆರ್ಥಿಕ ಸಂಶೋಧನಾ ವರದಿ ಹೇಳಿದೆ.