ನವದೆಹಲಿ: ಹಣದುಬ್ಬರ ನಿಯಂತ್ರಣ ಕ್ರಮವಾಗಿ ಜೂನ್ ಮೊದಲ ವಾರ ರೆಪೋ ದರವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಆರ್ಬಿಐ ರೆಪೋ ದರವನ್ನು ಶೇಕಡ 0.4 ರಷ್ಟು ಹೆಚ್ಚಳ ಮಾಡಿದ್ದು, ಇದಾದ ನಂತರ ಬಹುತೇಕ ಬ್ಯಾಂಕುಗಳಲ್ಲಿ ಎಲ್ಲಾ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗಿದೆ. ಜೂನ್ 6 ರಿಂದ 8 ರವರೆಗೆ ಆರ್ಬಿಐ ಹಣಕಾಸು ಪರಾಮರ್ಶೆ ಸಭೆ ನಡೆಯಲಿದ್ದು, ಹಣದುಬ್ಬರವನ್ನು 0.50 ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹಣಕಾಸು ಸಂಸ್ಥೆಗಳು ಅಂದಾಜು ಮಾಡಿವೆ.
ಕಳೆದ ಏಪ್ರಿಲ್ ನಲ್ಲಿ ರಿಟೇಲ್ ಹಣದುಬ್ಬರ ಕಳೆದ 8 ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿತ್ತು. ಇಂಧನ, ಆಹಾರ ಪದಾರ್ಥಗಳ ಏರಿಕೆಯಿಂದಾಗಿ ಹಣದುಬ್ಬರ ಏರಿಕೆಯಾಗಿದ್ದು, ಬಹುತೇಕ ಬ್ಯಾಂಕುಗಳ ಗೃಹ ಮತ್ತು ವಾಹನ ಸಾಲಗಳ ಬಡ್ಡಿ ದರವನ್ನು ಏರಿಕೆ ಮಾಡಿವೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಬಡ್ಡಿದರ ಮತ್ತಷ್ಟು ಏರಿಕೆಯಾಗಲಿದೆ. ಇದೇ ವೇಳೆ ಉಳಿತಾಯ ಯೋಜನೆಗಳ ಬಡ್ಡಿದರ ಕೂಡ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.