
ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಸುವರ್ಣಾವಕಾಶವಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ ಪಾಸ್ ಆದವರಿಗೆ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಅವಕಾಶ ಸಿಗ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 241 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕ್ ನ ಅಧಿಕೃತ ವೆಬ್ಸೈಟ್ www.rbi.org.in ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದಿಂದ 113 ಮಂದಿ, ಎಸ್ಸಿ 32, ಎಸ್ಟಿ 33, ಓಬಿಸಿ 45 ಮತ್ತು ಇಡಬ್ಲ್ಯುಎಸ್ ನ 18 ಮಂದಿಗೆ ಅವಕಾಶ ಸಿಗಲಿದೆ. ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯರ್ಥಿ 10ನೇ ತರಗತಿ ಪಾಸ್ ಆಗಿರಬೇಕು. ಪದವಿ ಪಡೆದ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿ ಅರ್ಜಿ ಸಲ್ಲಿಸುವಂತಿಲ್ಲ. 25 ವರ್ಷದಿಂದ 45 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಜನವರಿ 22ರಿಂದ ಆನ್ಲೈನ್ ಭರ್ತಿ ಶುರುವಾಗಿದೆ. ಫೆಬ್ರವರಿ 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾರ್ಚ್ ನಲ್ಲಿ ಆನ್ಲೈನ್ ಪರೀಕ್ಷೆ ಏರ್ಪಡಿಸುವ ಸಾಧ್ಯತೆಯಿದೆ.