ಆರ್‌ಬಿಐನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ. ಮಹೇಶ್ ನೋಟು ನಿಷೇಧದ ದಿನವನ್ನು ಮತ್ತೆ ನೆನಪಿಸಿದ್ದಾರೆ. 5, 10 ಮತ್ತು 100 ರೂಪಾಯಿಗಳ ಹಳೆಯ ನೋಟುಗಳನ್ನು ಹಿಂಪಡೆಯುವ ಯೋಜನೆ ಬಗ್ಗೆ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸುತ್ತಿದೆ ಎಂದು ಬಿ. ಮಹೇಶ್ ಹೇಳಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ಘೋಷಣೆಯಾಗಲಿದೆ.
ನಕಲಿ ನೋಟುಗಳ ಅಪಾಯವನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಹಳೆಯ ನೋಟುಗಳ ವಹಿವಾಟನ್ನು ರದ್ದು ಮಾಡುತ್ತದೆ. ಅಧಿಕೃತ ಘೋಷಣೆಯ ನಂತರ ಎಲ್ಲಾ ಹಳೆಯ ನೋಟುಗಳನ್ನು ಬ್ಯಾಂಕಿಗೆ ಜಮಾ ಮಾಡಬೇಕಾಗುತ್ತದೆ. ಹಳೆ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು. ಇಲ್ಲವೆ ಬ್ಯಾಂಕ್ ಗೆ ಹಣ ನೀಡಿ ಹೊಸ ನೋಟನ್ನು ಪಡೆಯಬಹುದು.
2 ವರ್ಷಗಳ ಹಿಂದೆ ಆರ್‌ಬಿಐ 100 ರ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು. 10 ರೂಪಾಯಿ ನಾಣ್ಯಗಳು ರಿಸರ್ವ್ ಬ್ಯಾಂಕಿಗೆ ತಲೆನೋವಾಗಿ ಪರಿಣಮಿಸಿದೆ. 10 ರೂಪಾಯಿ ನಾಣ್ಯವನ್ನು 15 ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಆದರೆ ಅಂಗಡಿಯವರು ಮತ್ತು ಉದ್ಯಮಿಗಳು ಇದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಅದರ ಸಿಂಧುತ್ವದ ಬಗ್ಗೆ ವದಂತಿ ಹರಡಿದೆ. ಈ ನಾಣ್ಯವನ್ನು ಬಂದ್ ಮಾಡುವ ಯಾವುದೇ ಯೋಜನೆ ಇಲ್ಲ. ಹಾಗೆ ಯಾವುದೇ ನಕಲಿ ನಾಣ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.