ನವದೆಹಲಿ: ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಯುಪಿಐ ವಹಿವಾಟು ಜನಪ್ರಿಯಗೊಳಿಸಲಾಗುತ್ತಿದೆ. ಆದರೆ, ಯುಪಿಐ ವಹಿವಾಟಿಗೂ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ.
ಯುಪಿಐ ಪಾವತಿ ವ್ಯವಸ್ಥೆ, ಆರ್.ಟಿ.ಜಿ.ಎಸ್., ನೆಫ್ಟ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ನಡೆಸುವ ಪಾವತಿಗಳಿಗೆ ನಿರ್ದಿಷ್ಟ ಶುಲ್ಕ ವಿಧಿಸುವ ಕುರಿತು ಅಕ್ಟೋಬರ್ 3 ರ ಮೊದಲ ಅಭಿಪ್ರಾಯ ತಿಳಿಸುವಂತೆ ಆರ್.ಬಿ.ಐ. ಕೋರಿದೆ. ಪ್ರಸ್ತುತ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹಣ ಪಾವತಿಸುವವರು, ಸ್ವೀಕರಿಸುವವರು ಯಾವುದೇ ಶುಲ್ಕವನ್ನು ಕೊಡಬೇಕಿಲ್ಲ.
ಈಗ ಆರ್.ಬಿ.ಐ. ಇಂತಹ ಪಾವತಿಗಳಿಗೆ ಶುಲ್ಕ ವಿಧಿಸಬಹುದೇ ಎಂದು ಅಕ್ಟೋಬರ್ 3ಕ್ಕೆ ಮೊದಲು ಅಭಿಪ್ರಾಯ ತಿಳಿಸಿರುವಂತೆ ಕೋರಿದೆ. ವಹಿವಾಟಿನ ಮೊತ್ತಕ್ಕೆ ಅನುಗುಣವಾಗಿ ಶುಲ್ಕ ಪಡೆಯಬಹುದೇ ಅಥವಾ ವಹಿವಾಟಿನ ಮೊತ್ತ ಎಷ್ಟೇ ಇದ್ದರೂ ಒಂದೇ ರೀತಿಯ ಶುಲ್ಕ ಪಡೆಯಬಹುದೇ? ಇಲ್ಲವೇ ದೊಡ್ಡ ಮೊತ್ತದ ವಹಿವಾಟುಗಳಿಗೆ ಮಾತ್ರ ಶುಲ್ಕವಿಧಿಸಿ ಸಣ್ಣ ಮೊತ್ತಗಳಿಗೆ ವಿನಾಯಿತಿ ನೀಡಬಹುದೇ ಎಂದು ಆರ್.ಬಿ.ಐ. ಕೇಳಿದೆ. RBI ಯುಪಿಐ ಆಧಾರಿತ ಹಣ ವರ್ಗಾವಣೆಗೆ ಶುಲ್ಕಗಳನ್ನು ಪರಿಚಯಿಸಲು ಚಿಂತನೆ ನಡೆಸಿದ್ದು, ಈ ಪ್ರಸ್ತಾಪದ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಕೇಳಿದೆ.