ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಆರ್ಬಿಐ ಈ ನೀತಿಯಿಂದ ಡಿಜಿಟಲ್ ಪೇಮೆಂಟ್ಸ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ,ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗೆ ಖುಷಿ ಸುದ್ದಿ ಸಿಕ್ಕಿದೆ.
ಆರ್.ಬಿ.ಐ.,ಪಾವತಿ ಬ್ಯಾಂಕುಗಳ ಠೇವಣಿ ಮಿತಿಯನ್ನು ಹೆಚ್ಚಿಸಿದೆ. ಬ್ಯಾಂಕ್ ಠೇವಣಿ ಮಿತಿಯನ್ನು 1 ಲಕ್ಷ ರೂಪಾಯಿಗಳಿಂದ 2 ಲಕ್ಷಕ್ಕೆ ಹೆಚ್ಚಿಸಿದೆ.
ಬಳಕೆದಾರರಿಗೆ ಒಂದು ವಾಲೆಟ್ ನಿಂದ ಇನ್ನೊಂದು ವಾಲೆಟ್ ಗೆ ಹಣ ವರ್ಗಾಯಿಸಲು ಸ್ವಾತಂತ್ರ್ಯ ಸಿಗಬೇಕು. ಈಗ ಗೂಗಲ್ ಪೇನಿಂದ ಪೇಟಿಎಂಗೆ ಹಣ ವರ್ಗಾಯಿಸಲು ಬರುವುದಿಲ್ಲ. ಹಾಗಾಗಿ ವಾಲೆಟ್ ನವೀಕರಿಸಲು ಆರ್.ಬಿ.ಐ. ಕೆಲಸ ಮಾಡ್ತಿದೆ ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರವು 2022 ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇಕಡಾ 5 ರಷ್ಟಾಗಬಹುದು ಎಂದವರು ಹೇಳಿದ್ದಾರೆ.