ಭಾರತೀಯ ರಿಸರ್ವ್ ಬ್ಯಾಂಕ್ ವಾರದ ಕೊನೆಯಲ್ಲಿ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲು ಸಜ್ಜಾಗಿದೆ. ಬಹುವರ್ಷದ ಅಧಿಕ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ರೆಪೊ ದರವನ್ನು ಮತ್ತೊಮ್ಮೆ ಹೆಚ್ಚಿಸುವ ನಿರೀಕ್ಷೆಯಿದೆ.
RBI ರೆಪೋ ದರದಲ್ಲಿನ ಯಾವುದೇ ಬದಲಾವಣೆಯು ಬ್ಯಾಂಕಿನ ಸಾಲ ಮತ್ತು ಠೇವಣಿ ದರಗಳ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಎರಡು ನೀತಿಗಳಲ್ಲಿ ಆರ್.ಬಿ.ಐ. ರೆಪೊ ದರವನ್ನು 90 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದಾಗ, ಸಾಲ ದರಗಳು ಮತ್ತು ಠೇವಣಿ ದರಗಳನ್ನು ಬ್ಯಾಂಕ್ ಗಳು ಹೆಚ್ಚಿಸಿವೆ. ದರ ಏರಿಕೆಯ ಸನ್ನಿವೇಶದಲ್ಲಿ, ಬ್ಯಾಂಕುಗಳು ಸಾಮಾನ್ಯವಾಗಿ ಈ ಹೂಡಿಕೆ ಕಾರ್ಯವಿಧಾನದ ಮೇಲೆ ಬಡ್ಡಿದರಗಳನ್ನು ಹೆಚ್ಚಿಸುವುದರಿಂದ ಸ್ಥಿರ ಠೇವಣಿಗಳು ಆಕರ್ಷಕವಾಗುತ್ತವೆ. ಎಫ್.ಡಿ.ಗಳು ಭಾರತದಲ್ಲಿನ ಹೂಡಿಕೆಯ ಸುರಕ್ಷಿತ ಮತ್ತು ಸಾಂಪ್ರದಾಯಿಕ ರೂಪಗಳಲ್ಲಿ ಒಂದಾಗಿದೆ. ಇದು ಖಾತರಿಯ ಲಾಭ ನೀಡುತ್ತದೆ. ಅಲ್ಲದೇ ಅಪಾಯಮುಕ್ತವಾಗಿರುತ್ತದೆ.
ಆರ್.ಬಿ.ಐ. ಮೇ ತಿಂಗಳಲ್ಲಿ ರೆಪೊ ದರದಲ್ಲಿ 40 ಬೇಸಿಸ್ ಪಾಯಿಂಟ್ ಗಳ ಹೆಚ್ಚಳದೊಂದಿಗೆ ದರ ಏರಿಕೆ ಪ್ರಾರಂಭಿಸಿದೆ. ಇದು ಜುಲೈನಲ್ಲಿ 50 ಬೇಸಿಸ್ ಪಾಯಿಂಟ್ ಗಳ ಮತ್ತೊಂದು ದರ ಹೆಚ್ಚಳ ಅನುಸರಿಸಿತು. ರೆಪೊ ದರವು ಪ್ರಸ್ತುತ 4.90% ರಷ್ಟಿದೆ. ಪ್ರಸ್ತುತ ಹಣದುಬ್ಬರವು ಜೂನ್ ನಲ್ಲಿ 7.01% ರಷ್ಟಿದೆ.