ನವದೆಹಲಿ: ಆರ್.ಬಿ.ಐ. ಪ್ರಮುಖ ಪಾಲಿಸಿ ದರ ಏರಿಕೆ ಘೋಷಣೆ ಮಾಡಿದ್ದು, ಇದರಿಂದಾಗಿ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಇದೇ ವೇಳೆ ನಿಶ್ಚಿತ ಠೇವಣಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.
ನಿಶ್ಚಿತ ಠೇವಣಿ ಬಡ್ಡಿ ದರ ಏರಿಕೆಯಾಗಲಿದೆ. ಅಲ್ಪಾವಧಿ, ಮಧ್ಯಮಾವಧಿ ನಿಶ್ಚಿತ ಠೇವಣಿಗಳ ಬಡ್ಡಿದರ ಏರಿಕೆಯಾಗಲಿದ್ದು, ನಂತರದ ಹಂತದಲ್ಲಿ ದೀರ್ಘಾವಧಿಯ ನಿಶ್ಚಿತ ಠೇವಣಿಗಳ ಬಡ್ಡಿದರ ಕೂಡ ಏರಿಕೆಯಾಗಲಿದೆ ಎನ್ನಲಾಗಿದೆ.
ಅಲ್ಪಾವಧಿ, ಮಧ್ಯಮಾವಧಿ ಠೇವಣಿಗಳ ಬಡ್ಡಿದರ ಏರಿಕೆಯಾಗುವುದರಿಂದ ದೀರ್ಘಾವಧಿಯ ಠೇವಣಿಗಳ ಅವಧಿ ಮುಗಿದಿದ್ದಲ್ಲಿ, ನವೀಕರಿಸಬಹುದಾದಲ್ಲಿ ಅವುಗಳನ್ನು ಅಲ್ಪಾವಧಿಗೆ ಬದಲಾಯಿಸಿಕೊಳ್ಳುವುದರಿಂದ ಅನುಕೂಲವಾಗುತ್ತದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.