ಮುಂಬೈ: ಜೂನ್ 2 ರಿಂದ 4 ರವರೆಗೆ ಆರ್ಬಿಐ ಹಣಕಾಸು ನೀತಿಯ ಸಮಿತಿ ಸಭೆ ನಡೆಯಲಿದ್ದು, ಬಡ್ಡಿದರದ ಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಕೊರೋನಾ ಸಾಂಕ್ರಾಮಿಕ ರೋಗದ ಎರಡನೆಯ ಅನಿಶ್ಚಿತತೆ ಮತ್ತು ಹಣದುಬ್ಬರ ಏರಿಕೆ ಕಾರಣದಿಂದ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 2 ರಿಂದ 4 ರವರೆಗೆ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು, 4 ರಂದು ಸಭೆಯಲ್ಲಿ ಕೈಗೊಂಡ ನಿರ್ಧಾರ ಪ್ರಕಟಿಸಲಾಗುತ್ತದೆ. ಏಪ್ರಿಲ್ ನಲ್ಲಿ ನಡೆದ ಸಭೆಯಲ್ಲಿ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ರೆಪೊ ದರ ಶೇಕಡ 4 ರಷ್ಟು ಉಳಿಸಿಕೊಳ್ಳಲಾಗಿದ್ದು, ರಿವರ್ಸ್ ರೆಪೋ ದರ ಶೇಕಡ 3.35 ರಷ್ಟು ಇದೆ.