ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಬಡ್ಡಿದರ ಸೇರಿದಂತೆ ಇತರೆ ಹಣಕಾಸು ನೀತಿಗಳನ್ನು ಆರ್ಬಿಐ ಬುಧವಾರ ಪ್ರಕಟಿಸಲಿದೆ.
ಕೊರೋನಾ ಕಾರಣದಿಂದಾಗಿ ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ ಕೋವಿಡ್ ಪ್ರಕರಣ ತೀವ್ರವಾಗಿ ಏರಿಕೆಯಾಗುತ್ತಿರುವುದದಿಂದ ಆರ್ಥಿಕ ಬೆಳವಣಿಗೆಗೆ ಹೊಡೆತ ಬಿದ್ದಿದೆ. ಚಿಲ್ಲರೆ ಹಣದುಬ್ಬರದ ಗುರಿಯನ್ನು ಶೇಕಡ 4 ರಷ್ಟು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೆಪೋದರ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕಾದ ಒತ್ತಡ ನಿರ್ಮಾಣವಾಗಿದೆ.
ಪ್ರಸ್ತುತ ರೆಪೋ ದರ ಶೇಕಡ 4 ಮತ್ತು ರಿವರ್ಸ್ ರೆಪೋ ದರ ಶೇಕಡ 3.35 ರಷ್ಟು ಇದೆ. ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರೆದರೆ ಬ್ಯಾಂಕುಗಳು ಬಡ್ಡಿದರ ಕಡಿಮೆ ಮಾಡುವ ಅವಕಾಶಗಳಿದ್ದು, ಇದರಿಂದ ಆರ್ಥಿಕ ಚೇತರಿಕೆಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.