ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ವರೆಗೂ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇಡುವ ಸಾಧ್ಯತೆ ಇದೆ. ಆಗಸ್ಟ್ ನಲ್ಲಿ ಬಡ್ಡಿ ದರ ಶೇ. 0.50 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಸ್ವಿನ್ ಬ್ರೋಕರೇಜ್ ಕಂಪನಿ ಯುಬಿಎಸ್ ಸೆಕ್ಯೂರಿಟೀಸ್ ಇಂಡಿಯಾ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇ. 6.01 ಕ್ಕೆ ಏರಿಕೆಯಾಗಿದ್ದು, ಏಪ್ರಿಲ್ ವರೆಗೂ ಇದು ಮುಂದುವರೆಯುವ ಸಾಧ್ಯತೆ ಇದೆ. ಇನ್ನು ಸಗಟು ಹಣದುಬ್ಬರ ಶೇ. 12.96 ಕ್ಕೆ ಏರಿಕೆಯಾಗಿದ್ದರೂ, ಅಂಕಿ ಅಂಶಗಳ ಬೇಸ್ ಪರಿಣಾಮದಿಂದ ಅಧಿಕ ಹಣದುಬ್ಬರ ಅಂಕಿ ಅಂಶಗಳು ದಾಖಲಾಗಿವೆ ಎನ್ನಲಾಗಿದ್ದು, ಇದೇ ಟ್ರೆಂಡ್ ಕೆಲ ತಿಂಗಳು ಮುಂದುವರೆಯಬಹುದು ಎಂದು ಹೇಳಲಾಗಿದೆ.